

ಮುಂಬೈ: ಮಜಾರಾಷ್ಟ್ರದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ರಾಜ್ಯದಲ್ಲಿ ಲಾಕ್ಡೌನ್ ಮಾಡುವ ಬಗ್ಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಾತನಾಡಿದ್ದಾರೆ. ರಾಜ್ಯದ ಜನರು ಮಾಸ್ಕ್ ತೊಡದಿದ್ದರೆ ಆ ಸ್ಥಳಗಳಲ್ಲಿ ಲಾಕ್ಡೌನ್ ಮಾಡುವುದಾಗಿ ಅವರು ಹೇಳಿದ್ದಾರೆ.
ಜನರು ಮಾಸ್ಕ್ ಧರಿಸಿ, ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಒಂದು ವೇಳೆ ಅವರು ಅದರಲ್ಲಿ ವಿಫಲವಾದರೆ ನಾವು ಲಾಕ್ಡೌನ್ ಜಾರಿ ಮಾಡಲಿದ್ದೇವೆ. ನಮಗೆ ಅಭಿವೃದ್ಧಿಯನ್ನು ನಿಲ್ಲಿಸುವ ಆಸಕ್ತಿ ಇಲ್ಲ. ಆದರೆ ಜನರು ಅದಕ್ಕೆ ದಾರಿ ಮಾಡಿಕೊಟ್ಟರೆ ನಾವು ಮಾಡಲೇಬೇಕಾಗುತ್ತದೆ. ರಾಜ್ಯಾದ್ಯಂತ ಲಾಕ್ಡೌನ್ ಇಲ್ಲ ಆದರೆ ಆಯಾ ಸ್ಥಳಗಳಲ್ಲಿ ಲಾಕ್ಡೌನ್ ಜಾರಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈಗಾಗಲೇ ಅಮರಾವತಿ ಜಿಲ್ಲೆಯಲ್ಲಿ ಲಾಕ್ಡೌನ್ ಜಾರಿ ಮಾಡಲಾಗಿದೆ. ಅದರ ಜತೆಯಲ್ಲಿ ಅಕೋಲಾ, ಬುಲ್ಖಾನಾ, ವಾಶಿಮ್ ಮತ್ತು ಯವತ್ಮಾಲ್ ಜಿಲ್ಲೆಗಳ ಕೆಲ ನಗರಗಳಲ್ಲೂ ಭಾಗಶಃ ಲಾಕ್ಡೌನ್ ಅನ್ನು ಘೋಷಣೆ ಮಾಡಲಾಗಿದೆ. ಒಂದು ವೇಳೆ ಜನರು ಲಾಕ್ಡೌನ್ ನಿಯಮ ಪಾಲಿಸುವಲ್ಲಿ ವಿಫಲವಾದರೆ ಲಾಕ್ಡೌನ್ ವಿಸ್ತರಣೆ ಮಾಡಲಾಗುವುದು ಎಂದು ತಿಳಿಸಲಾಗಿದೆ. (ಏಜೆನ್ಸೀಸ್)