ನಿಷ್ಠಾವಂತರನ್ನು ಕಡೆಗಣಿಸುತ್ತಿರುವ ನೋವಿದೆ

MLA-Roopakala
Published on

ಕೋಲಾರ: ಕಾಂಗ್ರೆಸ್​ನಲ್ಲಿ ಶಾಸಕರ ಮಧ್ಯೆ ಹೊಂದಾಣಿಕೆ ಇಲ್ಲ ಎನ್ನುವುದಕ್ಕಿಂತ ನಿಷ್ಠಾವಂತರನ್ನು ಕಡೆಗಣಿಸುತ್ತಿರುವ ನೋವು ಇದೆ ಎಂದು ಕೆಜಿಎಫ್​ ಶಾಸಕಿ ರೂಪಕಲಾ ಹೇಳಿದರು.

ನಗರದ ಜಿಪಂ ಕಚೇರಿ ಬಳಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷಕ್ಕೆ ಎಂತಹ ಅಗ್ನಿ ಪರೀಕ್ಷೆ ಇದ್ದಾಗಲೂ ಸಹ ಪಕ್ಷದ ಗೌರವ ಉಳಿಸಿದವರು ಯಾರು, ಕಾರ್ಯಕರ್ತರಿಗೆ ಅವಕಾಶ ನೀಡಿದ್ದೇವೆ ಎನ್ನುವ ವಿಚಾರ ಮುಖ್ಯವಾಗಿರುತ್ತದೆ ಎಂದರು.

ಪಕ್ಷ ಸಂಕಷ್ಟದಲ್ಲಿದ್ದಾಗಲೂ ನಾವು ಅಗೌರವವಾಗಿ ನಡೆದುಕೊಂಡಿಲ್ಲ, ಮಾಧ್ಯಮಗಳ ಮುಂದೆ ಹೋಗಿಲ್ಲ, ಬ್ಲಾಕ್​ಮೇಲ್​ ಮಾಡಿಲ್ಲ, ಸುಳ್ಳು ಪ್ರಚಾರಕ್ಕಾಗಿ ಯಾವ ವೇದಿಕೆಯನ್ನೂ ಬಳಸಿಕೊಂಡಿಲ್ಲ. ಪಕ್ಷ ನಮ್ಮನ್ನು ಗುರುತಿಸಿದ ಮೇಲೆ ಪಕ್ಷಕ್ಕ ನಾವು ಮೊದಲ ಆದ್ಯತೆಯನ್ನು ನೀಡಬೇಕು ಎಂದರು. ಪಕ್ಷದ ವಿಚಾರ ಬಂದಾಗ ತಾಯಿ ಸ್ಥಾನದಲ್ಲಿ ಕಾಣಬೇಕು. ಆದರೆ, ತಾಯಿ ಎಂದು ಹೇಳಿ ಪಕ್ಷಕ್ಕೆ ಯಾರು ಏನು ಅಗೌರವ ಮಾಡಿದ್ದಾರೆ, ಏನೇನು ಆಟ ಆಡಿದ್ದಾರೆ ಎನ್ನುವುದನ್ನು ಹಿರಿಯರು ತಿಳಿದುಕೊಳ್ಳಬೇಕಿದೆ. ಅದರ ಬಗ್ಗೆಯೂ ನೋವಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net