

ಕೋಲಾರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಪೂರೈಸುತ್ತಿದ್ದು, ಸಚಿವರ ಬದಲಾವಣೆ ಪ್ರಶ್ನೆ ಬಂದಿಲ್ಲ ಎಂದು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಕೆಜಿಎಫ್ ತಾಲೂಕಿನ ನಲ್ಲೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರ ಬದಲಾವಣೆ, ಸಂಪುಟ ವಿಸ್ತರಣೆ ವಿಚಾರ ಹೈಕಮಾಂಡ್ಗೆ ಬಿಟ್ಟಿದ್ದು. ಸಿಎಂ ಬದಲಾವಣೆ, ಸಚಿವರ ಬದಲಾವಣೆ ವಿಚಾರಗಳ ಬಗ್ಗೆ ವಿರೋಧ ಪಕ್ಷದವರು ಹಬ್ಬಿಸುತ್ತಿರುವುದೆಲ್ಲ ಸುಳ್ಳು ಎಂದ ಅವರು, ಬಿಹಾರ ಚುನಾವಣೆಯಲ್ಲಿ ಇಂಡಿ ಒಕ್ಕೂಟ ಗೆಲ್ಲಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ಕಾನೂನು ಪರಿಪಾಲನೆ ಮಾಡುವವರು, ಜನರಿಗೆ ನ್ಯಾಯ ಕೊಡಿಸುವವರು ವಕೀಲರು, ಅಂತಹ ವೃತ್ತಿಯಲ್ಲಿರುವ ವಕೀಲ ಅನಾಗರಿಕತೆಯಿಂದ ನಡೆದುಕೊಂಡಿದ್ದಾರೆ. ಈ ರೀತಿ ವರ್ತಿಸಿರುವುದು ಖಂಡನೀಯ ಎಂದರು.
ಸಮೀಕ್ಷೆಯಲ್ಲಿ ಆರೂವರೆಗೆ ಕೋಟಿ ಜನ ಪಾಲ್ಗೊಂಡಿದ್ದಾರೆ. ಸಮುದಾಯಗಳ ಅಭಿವೃದ್ಧಿ ನಿಟ್ಟಿನಲ್ಲಿ ಈ ಸಮೀಕ್ಷೆ ನಡೆಯುತ್ತಿದೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರಿಗೆ ಅನುಕೂಲ ಮಾಡಿಕೊಡಲು ಸಹಾಯವಾಗಲಿದೆ. ಅ.18ರವರೆಗೆ ಸಮೀಕ್ಷೆ ವಿಸ್ತರಿಸಿದ್ದು, ಎಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಕೋರಿದರು.
ಬಿಪಿಎಲ್ ಚೀಟಿ ವಾಪಸ್ ಪಡೆಯುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಅನರ್ಹರು ಬಿಪಿಎಲ್ ಪಡೆದುಕೊಂಡಿರುವ ಬಗ್ಗೆ ಮಾಹಿತಿ ಬಂದಿದ್ದು, ಪರಿಶೀಲಿಸಿ ಎಪಿಎಲ್ಗೆ ತರಲಾಗುತ್ತಿದೆ. ಯಾರು ಬಿಪಿಎಲ್ ಚೀಟಿಗಾಗಿ ಎರಡೂವರೆ ವರ್ಷದಿಂದ ಕಾಯುತ್ತಿದ್ದಾರೆ. ಅಂಥ ಅರ್ಹರಿಗೆ ಬಿಪಿಎಲ್ ಚೀಟಿ ನೀಡಲಾಗುವುದು ಎಂದು ಕೆ.ಎಚ್.ಮುನಿಯಪ್ಪ ತಿಳಿಸಿದರು.