ಜನಮತ| ಗಡಿ ವಿವಾದ ಬೇಡ, ಸಾಮರಸ್ಯ ಮುಖ್ಯ

Kannada
Published on

‘ಬಹುಸಂಖ್ಯೆಯಲ್ಲಿರುವ ಮರಾಠಿ ಭಾಷೆಗಳ ಮತ್ತು ಸಾಂಸ್ಕೃತಿಕ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಲು ಸರ್ಕಾರ ಬದ್ಧವಾಗಿದೆ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳುವ ಮೂಲಕ ಗಡಿ ವಿವಾದಕ್ಕೆ ಜೀವ ತುಂಬುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ಇದು ಮಹಾರಾಷ್ಟ್ರದ ರಾಜಕೀಯ ನಾಯಕರ ಸಂಕುಚಿತ ಮನೋಭಾವದ ಅನಾವರಣವೂ ಹೌದು. ಮರಾಠಿಗಳ ಭಾವನೆಗಳನ್ನು ಕೆರಳಿಸಿ ರಾಜಕೀಯ ಲಾಭ ಪಡೆಯುವುದು, ಪ್ರಸಕ್ತ ಸಮಸ್ಯೆಗಳ ಪರಿಹಾರ ಬಿಟ್ಟು ಜನರ ಗಮನವನ್ನು ಬೇರೆಡೆ ಸೆಳೆಯುವುದು ಅವರ ಉದ್ದೇಶ.

ನಮ್ಮ ದೇಶದ ವಿವಿಧ ರಾಜ್ಯಗಳಲ್ಲಿ ಅನ್ಯಭಾಷಿಕರು ಇರುತ್ತಿದ್ದು ಅಲ್ಲಿಯ ಜನರೊಂದಿಗೆ ಬೆರೆತುಕೊಂಡಿದ್ದಾರೆ. ಸಾಮರಸ್ಯ, ಸೌಹಾರ್ದಯುತ ಸಂಬಂಧಗಳಿಗೆ ಮಾರಕವಾಗುವ ಇಂಥ ರಾಜಕಾರಣಿಗಳ ಹೇಳಿಕೆಗಳಿಗೆ ಕಡಿವಾಣ ಬೀಳಬೇಕು. ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಸದ್ಯ ಸುಪ್ರೀಂ ಕೋರ್ಟ್​ನಲ್ಲಿ ಇರುವುದರಿಂದ ಯಾರೂ ಇಂಥ ಹೇಳಿಕೆಗಳನ್ನು ನೀಡಬಾರದು. ರಾಜಕಾರಣಿಗಳು ವೋಟಿಗಾಗಿ ಸಾಮರಸ್ಯ ಕದಡದೆ, ಜನರ ಶಾಂತಿಯುತ ಬದುಕಿಗೆ ದಾರಿಮಾಡಿಕೊಡಬೇಕು.

| ಉದಯ ಮ. ಯಂಡಿಗೇರಿ ಧಾರವಾಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net