

ನವದೆಹಲಿ: ಜನಧನ, ಮೂಲ ಉಳಿತಾಯ (ಬಿಎಸ್ಬಿಡಿ) ಬ್ಯಾಂಕ್ ಖಾತೆದಾರರಿಗೆ ಹೆಚ್ಚುವರಿ ಸೇವಾ ಶುಲ್ಕ ವಿಧಿಸಿಲ್ಲ್ಲ ಎಂದು ಹಣಕಾಸು ಸಚಿವಾಲಯ ಹಾಗೂ ಆರ್ಬಿಐ ಮಂಗಳವಾರ ಸ್ಪಷ್ಟಪಡಿಸಿವೆ.
ಸಾರ್ವಜನಿಕ ವಲಯದ ಬ್ಯಾಂಕ್ಗಳು ನ.1ರಿಂದ ಸೇವಾ ಶುಲ್ಕ ಹೆಚ್ಚಿಸಿರುವ ಕುರಿತ ವರದಿ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಲಾಗಿದೆ. 41.43 ಕೋಟಿ ಜನಧನ ಖಾತೆ ಸಹಿತ ಒಟ್ಟು 60.64 ಕೋಟಿ ಬಿಎಸ್ಬಿಡಿ ಖಾತೆಗಳಿವೆ. ಸಾಮಾನ್ಯ ಉಳಿತಾಯ ಖಾತೆ, ಚಾಲ್ತಿ ಖಾತೆ, ನಗದು ಕ್ರೆಡಿಟ್ ಖಾತೆ ಮತ್ತು ಓವರ್ಡ್ರಾಫ್ಟ್ ಖಾತೆಗಳಿಗೆ ಸಂಬಂಧಿಸಿ ಯಾವುದೇ ಸೇವಾ ಶುಲ್ಕ ಹೆಚ್ಚಿಸಿಲ್ಲ.
ತಿಂಗಳಿಗೆ ಮೂರು ಸಾರಿ ಹಣ ಜಮಾ, ವಿತ್ಡ್ರಾವಲ್ಗೆ ಯಾವುದೇ ಶುಲ್ಕವಿಲ್ಲ. ನಾಲ್ಕನೇ ವಹಿವಾಟಿಗೆ ಶುಲ್ಕ ತೆರಬೇಕು ಎಂದು ಹೇಳಲಾಗಿತ್ತು. ಬ್ಯಾಂಕ್ ಆಫ್ ಬರೋಡಾ ಇದನ್ನು ನ.1ರಿಂದ ಜಾರಿಗೆ ತಂದಿತ್ತು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಬದಲಾವಣೆಗಳನ್ನು ವಾಪಸ್ ಪಡೆಯಲು ಅದು ನಿರ್ಧರಿಸಿದೆ.