

ಹಾವೇರಿ ಜಿಲ್ಲೆಯಲ್ಲಿಯೆ ಅತಿ ದೊಡ್ಡ ತಾಲೂಕು ಕೇಂದ್ರ, ಪ್ರಮುಖ ವಾಣಿಜ್ಯ ನಗರ ಎಂದೇ ಹೆಸರು ಪಡೆದ ಈ ರಾಣೆಬೆನ್ನೂರಿನಲ್ಲಿ ನಿತ್ಯ ಸಾವಿರಾರು ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಆಗಮಿಸುತ್ತಾರೆ. ಅತಿಹೆಚ್ಚು ಶಾಲಾ&ಕಾಲೇಜ್ ನಗರದಲ್ಲಿರುವ ಕಾರಣ ಸಾವಿರಾರು ಶಾಲಾ&ಕಾಲೇಜ್ ವಿದ್ಯಾಥಿರ್ಗಳು ಬರುತ್ತಾರೆ. ಆದರೆ, ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲವಾಗಿದೆ. ಈಗಂತೂ ಬೇಸಿಗೆ ದಿನವಾಗಿದ್ದರಿಂದ ಪರಿಸ್ಥಿತಿ ಮತಷ್ಟು ಬಿಗಡಾಯಿಸಿದೆ. ಬಸ್ ನಿಲ್ದಾಣದಲ್ಲಿ ಸ್ಥಳಿಯ ಶಾಸಕರ ಅನುದಾನದಲ್ಲಿ ನಿಮಿರ್ಸಿದ ಶುದ್ಧ ಕುಡಿಯುವ ನೀರಿನ ಟಕವಿದೆ. ಅದಕ್ಕೆ ನಳದ ನೀರಿನ ಸರಬರಾಜು ವ್ಯವಸ್ಥೆ ಇದೆ. ಆದರೆ, ಅದು ಬಂದ್ ಬಿದ್ದು ವರ್ಷಗಳೇ ಕಳೆದಿವೆ. ಟಕವಂತೂ ಕಸ, ಕಡ್ಡಿ ತುಂಬಿ ಹಾಳಾಗಿ ಹೋಗಿದೆ. ಇದನ್ನು ಸರಿಪಡಿಸಬೇಕಾದ ಸಾರಿಗೆ ಸಂಸ್ಥೆ ಅಧಿಕಾರಿಗಳು ಮಾತ್ರ ಅದನ್ನು ಸರಿಪಡಿಸಿ ನೀರು ಒದಗಿಸುವ ಪ್ರಯತ್ನ ಮಾಡದಿರುವುದು ವಿಪರ್ಯಾಸವೇ ಸರಿ. ಕುಡಿಯುವ ನೀರಿನ ವ್ಯವಸ್ಥೆ ನಿಂತು ಹೋಗಿದ್ದರಿಂದ ನಗರಕ್ಕೆ ಬಂದ ನೂರಾರು ಪ್ರಯಾಣಿಕರು, ಬಸ್ ಚಾಲಕ -ನಿರ್ವಾಹಕರು ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಅನಿವಾರ್ಯವಾಗಿ ಹೊರಗೆ ದುಡ್ಡು ಕೊಟ್ಟು ಮಿನರಲ್ ವಾಟರ್ಗಳನ್ನು ತೆಗೆದುಕೊಳ್ಳಬೇಕು. ಹೋಟೆಲ್ಗಳಲ್ಲಿ ನೀರು ಕುಡಿಯಲು ಹೋದರೆ ಹೋಟೆಲ್ನವರು ಕೊಡುವುದಿಲ್ಲ. ನೀರು ಪಡೆಯಬೇಕಾದರೆ ಅಲ್ಲಿ ಏನಾದರೂ ತಿನ್ನಬೇಕು. ಅಥವಾ ಚಹಾ, ಕಾಫಿ ಸೇವಿಸಬೇಕು. ಇದು ಜನರಿಗೆ ನುಂಗಲಾರದ ತುತ್ತಾಗಿದೆ. ನಗರಕ್ಕೆ ರಾಜ್ಯದ ಹಲವು ಕಡೆಗಳಿಂದ ನೇರ ಬಸ್ ಸೌಕರ್ಯವಿದ್ದು, ಅಹೋರಾತ್ರಿ ಬಸ್ಗಳು ಬರುತ್ತಿವೆ. ಬಸ್ ಹತ್ತುವರು, ಇಳಿದವರು ಶುದ್ಧ ಕುಡಿಯುವ ನೀರಿನ ಟಕದ ಬಳಿ ಹೋದರೆ ಅಲ್ಲಿ ನೀರಿಲ್ಲ. ರಾತ್ರಿ ಹೋಟೆಲ್ಗಳು ಮುಚ್ಚಿರುತ್ತವೆ. ಅಂಥ ಸಂದರ್ಭದಲ್ಲಿ ಪ್ರಯಾಣಿಕರ ಗೋಳು ಹೇಳತೀರದು. ರಾತ್ರಿ ತಂಗುವ ಬಸ್ಗಳ ಚಾಲಕ- ನಿವಾಹರ್ಕರಿಗೆ ಇದರ ಶಾಕ್ ಮುಟ್ಟುತ್ತದೆ. ಇನ್ನು ಶಾಲಾ&-ಕಾಲೇಜುಗಳ ವಿದ್ಯಾಥಿರ್ಗಳು ಕೂಡ ತೊಂದರೆ ಅನುಭವಿಸುತ್ತಿದ್ದಾರೆ. ಈಗಂತೂ ಮಧ್ಯಾಹ್ನದ ಸಮಯದಲ್ಲಿ ಪ್ರಯಾಣಿಕರು, ಮಕ್ಕಳು ನೀರಿಗಾಗಿ ಪರಿತಪಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ. ಆದ್ದರಿಂದ ಶುದ್ಧ ಕುಡಿಯುವ ನೀರಿನ ಟಕದ ಸರಿಪಡಿಸಬೇಕೆಂಬ ಸಾಮಾನ್ಯ ಜ್ಞಾನವೂ ಅಧಿಕಾರಿಗಳಿಗೆ ಬೇಡವೇ ಎಂದು ನೊಂದ ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ.