

ಸೊರಬ: ವಚನ ಸಾಹಿತ್ಯ ಪರಂಪರೆಯಲ್ಲಿ ಶರಣರ ಆಧ್ಯಾತ್ಮಿಕ ಚಿಂತನೆ ಹಾಗೂ ತತ್ವಾದರ್ಶಗಳಿಗೆ ಉನ್ನತ ಸ್ಥಾನಮಾನವಿದೆ. ಶರಣರು ರಚಿಸಿರುವ ವಚನಗಳು ಸಮಾಜಮುಖಿ ಸಂದೇಶ ಸಾರುತ್ತವೆ ಎಂದು ದಾಂಡೇಲಿ ಶಿವಪುರ ಉಳವಿ ಬಸವಧಾಮ ಆಶ್ರಮದ ಶ್ರೀ ಚನ್ನಬಸವಾನಂದ ಸ್ವಾಮೀಜಿ ಹೇಳಿದರು.
ಶ್ರಾವಣ ಸಂಜೆ ಹಾಗೂ ಶರಣ ಸಾಹಿತ್ಯ ಸಂಸ್ಥಾಪನಾ ದಿನದ ಅಂಗವಾಗಿ ಪಟ್ಟಣದ ಕಾನುಕೇರಿ ಮಠದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಸಮಾಜದ ಒಳಿತಿಗೆ ಕೆಲಸ ಮಾಡಬೇಕು. ಸದಾ ಕಾಯಕ ನಿಷ್ಠೆ ಹೊಂದಿರಬೇಕು. ಅಧ್ಯಾತ್ಮದ ದಾರಿಯಲ್ಲಿ ನಡೆಯಬೇಕು. ಶರಣರ ಅಧ್ಯಾತ್ಮದ ಸಾಧನೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆತ್ಮದ ವಿಕಾಸಕ್ಕೆ ಇಷ್ಟಲಿಂಗ ಕಾಯಕ ಮುಖ್ಯ ಎಂದು ತಿಳಿಸಿದರು.
ವೀರಶೈವ ಸಮಾಜದ ಟೌನ್ ಅಧ್ಯಕ್ಷ ವಿಶ್ವನಾಥ ಗೌಡ, ಕಾರ್ಯದರ್ಶಿ ಗಂಗಾಧರ್, ಅಕ್ಕನ ಬಳಗದ ರೇಣುಕಮ್ಮ ಗೌಳಿ, ಲತಾ, ಜಯಮಾಲಾ, ಕೃಷ್ಣಾನಂದ, ಪುಟ್ಟಸ್ವಾಮಿ, ಲಿಂಗರಾಜ್ ದೂಪದಮಠ, ನಾಗರಾಜು, ಚಂದ್ರಶೇಖರ ನಿಜಗುಣ, ಗುರುಮೂರ್ತಿ, ನಾಗರಾಜ್ ಮಾಸ್ತರ್ ಇತರರಿದ್ದರು.