‘ಅವರಿಬ್ಬರ ಪ್ರೀತಿ ಸ್ವಲ್ಪ ಅತಿಯಾಯ್ತು’! ಸೂರ್ಯ-ಜ್ಯೋತಿಕಾ ದಂಪತಿ ಕಾಲೆಳೆದ ನಟ ಕಾರ್ತಿ | Karthi Funny Speech

Karthi teases Suriya and Jyotika
ಸಿನಿಮಾ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಸೂರ್ಯ-ಜ್ಯೋತಿಕಾಗೆ ತಮಾಷೆ ಮಾಡಿದ ನಟ ಕಾರ್ತಿ
Published on: 

Scene Movie Audio Launch: ತಮಿಳು ಚಿತ್ರರಂಗದ ರಿಯಲ್ ಕಪಲ್ ಸೂರ್ಯ ಮತ್ತು ಜ್ಯೋತಿಕಾ ಜೋಡಿಗೆ ಇರುವ ಫ್ಯಾನ್ ಬೇಸ್ ಬಗ್ಗೆ ಎಲ್ಲರಿಗೂ ಗೊತ್ತು. ಇತ್ತೀಚೆಗೆ ಈ ಜೋಡಿಯ ಪ್ರೀತಿಯ ವಿಡಿಯೋ ಒಂದನ್ನು ನೋಡಿ ಸೂರ್ಯ ಅವರ ತಮ್ಮ, ನಟ ಕಾರ್ತಿ ತಮಾಷೆಯಾಗಿ ಕಾಲೆಳೆದಿದ್ದು, ಆ ಮಾತುಗಳು ಈಗ ಅಭಿಮಾನಿಗಳ ಗಮನ ಸೆಳೆಯುತ್ತಿವೆ.

ಜಿತು ಮಾಧವನ್ ನಿರ್ದೇಶನದಲ್ಲಿ, ಸೂರ್ಯ ಮತ್ತು ಜ್ಯೋತಿಕಾ ಅವರ '2ಡಿ ಎಂಟರ್‌ಟೈನ್‌ಮೆಂಟ್' ಸಂಸ್ಥೆ ನಿರ್ಮಿಸಿರುವ 'ಸೀನ್' ಸಿನಿಮಾ ಆಡಿಯೋ ಮತ್ತು ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಕಾರ್ತಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ವೇದಿಕೆಯಲ್ಲಿ ಮಾತನಾಡಿದ ಕಾರ್ತಿ, ತಮ್ಮ ಅಣ್ಣ ಹಾಗೂ ಅತ್ತಿಗೆಯ ನಡುವಿನ ಪ್ರೀತಿಯನ್ನು ತಮಾಷೆಯಾಗಿ ಹಾಗೂ ಮುದ್ದಾಗಿ ವರ್ಣಿಸಿದ್ದಾರೆ.

ಹೆಂಡತಿಯಂದಿರು ಗಂಡಂದಿರಿಗೆ ಬೈದಿರ್ತಾರೆ

‘ಅವರಿಬ್ಬರ ನಡುವಿನ ಪ್ರೀತಿ ಸ್ವಲ್ಪ ಅತಿಯಾಗಿಯೇ ಇದೆ. ಇದನ್ನು ನೋಡುವ ಎಷ್ಟೋ ಜನ ಹೆಂಡತಿಯರು ತಮ್ಮ ಗಂಡಂದಿರಿಗೆ 'ನೋಡಿ, ಅವರು ಹೇಗೆ ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆ... ನೀವೂ ಇದ್ದೀರಲ್ಲ’ ಎಂದು ಖಂಡಿತ ಬೈದಿರುತ್ತಾರೆ. ಆದರೆ ನಿಜ ಹೇಳಬೇಕೆಂದರೆ, ಆ ವಿಡಿಯೋ ನೋಡಲು ತುಂಬಾ ಸುಂದರವಾಗಿತ್ತು’ ಎಂದು ಕಾರ್ತಿ ವೇದಿಕೆಯಲ್ಲಿ ಹೇಳಿ ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸಿದರು.

ವೈರಲ್ ಆಗಿದ್ದ ದುಬೈ ವಿಡಿಯೋದ ಹಿನ್ನೆಲೆ

ಇತ್ತೀಚೆಗೆ ದುಬೈನಲ್ಲಿ ನಡೆದ ಪ್ರಚಾರದ ಕಾರ್ಯಕ್ರಮವೊಂದರಲ್ಲಿ ನಟ ಸೂರ್ಯ ವೇದಿಕೆಯ ಮೇಲೆ ತಮ್ಮ ಪತ್ನಿ ಜ್ಯೋತಿಕಾ ಮೇಲಿರುವ ಪ್ರೀತಿಯನ್ನು ಮುಕ್ತವಾಗಿ ವ್ಯಕ್ತಪಡಿಸಿದ್ದರು. ‘ಜ್ಯೋತಿಕಾ ನೀಡುವ ತುಂಬು ಪ್ರೀತಿಯನ್ನು ನನಗೆ ಮ್ಯಾಚ್ ಮಾಡಲು ಸಾಧ್ಯವೇ ಇಲ್ಲ’ ಎಂದು ಸೂರ್ಯ ಭಾವುಕರಾಗಿದ್ದರು.

ಇದನ್ನೂ ಓದಿ: ಗಂಡನನ್ನು ಬೆನ್ನ ಮೇಲೆ ಹೊತ್ತು ಡಿಸಿ ಆಫೀಸ್‌ಗೆ ಬಂದ ಹೆಂಡತಿ: 9 ವರ್ಷಗಳಿಂದ ಪಿಂಚಣಿಗಾಗಿ ಅಲೆದಾಟ | Burhanpur DC Office Incident

ಇನ್ನು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಈ ವಿಡಿಯೋವನ್ನು ಉಲ್ಲೇಖಿಸಿಯೇ ಕಾರ್ತಿ ಆಡಿಯೋ ಲಾಂಚ್‌ನಲ್ಲಿ ಜ್ಯೋತಿ-ಸೂರ್ಯ ಜೋಡಿಯ ಕಾಲೆಳೆದಿದ್ದಾರೆ.