

ಬೆಂಗಳೂರು: ಸದಾಕಾಲ ಸೆಕ್ಯೂರಿಟಿ ಇರುವ ತಾಜ್ ವೆಸ್ಟ್ ಎಂಡ್ ಹೋಟೆಲ್‌ಗೆ ನುಗ್ಗಿದ ಕಳ್ಳ ಅಡುಗೆ ಮನೆಯಲ್ಲಿ ಲ್ಯಾಪ್‌ಟಾಪ್ ಮತ್ತು ಮೇಕಪ್ ಕಿಟ್‌ನ್ನು ಕದ್ದು ಪರಾರಿಯಾಗಿದ್ದಾನೆ.
ರೇಸ್ ಕೋರ್ಸ್ ರಸ್ತೆಯ ತಾಜ್ ವೆಸ್ಟ್ ಎಂಡ್ ಹೋಟೆಲ್ ಸೆಕ್ಯೂರಿಟಿ ವ್ಯವಸ್ಥಾಪಕ ತಿಮ್ಮೇಗೌಡ, ಈ ಕುರಿತು ಹೈಗ್ರೌಂಡ್ಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.ಈಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೇ 4ರ ಬೆಳಗ್ಗೆ 8.15ರಲ್ಲಿ ಅಪರಿಚಿತ ವ್ಯಕ್ತಿ, ಹೋಟೆಲ್‌ನ ಮುಖ್ಯದ್ವಾರದಿಂದ ಒಳ ಪ್ರವೇಶ ಮಾಡಿ ಕೇಟರಿಂಗ್ ಸೇಲ್ಸ್ ವಿಭಾಗಕ್ಕೆ ಹೋಗಿ ಅಲ್ಲಿದ್ದ ಲ್ಯಾಪ್‌ಟಾಪ್ ಕದ್ದು ಅಲ್ಲಿಂದ ಸ್ಪಾ ವಿಭಾಗಕ್ಕೆ ಹೋಗಿ ಮೇಕಪ್ ಕಿಟ್ ಕದ್ದು ಕೆಲವೇ ನಿಮಿಷಗಳಲ್ಲಿ ಹೊರಬಂದಿದ್ದಾನೆ. 70 ಸಾವಿರ ರೂ. ಮೌಲ್ಯದ ವಸ್ತುಗಳು ಕಳವಾಗಿದ್ದು, ಆರೋಪಿಯನ್ನು ಪತ್ತೆಹಚ್ಚಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.