

ತೀರ್ಥಹಳ್ಳಿ: ಪಟ್ಟಣದ ರಾಮೇಶ್ವರ ದೇವಸ್ಥಾನಕ್ಕೆ ಸೋಮವಾರ ತಡರಾತ್ರಿ ಮುಸುಕುಧಾರಿ ವ್ಯಕ್ತಿಯೊಬ್ಬ ನುಗ್ಗಿ ನಗದು ಸೇರಿ, ಸುಮಾರು 80 ಸಾವಿರ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದಾನೆ. ಕಳ್ಳತನದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ದೇವಸ್ಥಾನ ಸಭಾಂಗಣದ ಛಾವಣಿಯ ಶೀಟ್ ಕಿತ್ತು ಕಳ್ಳ ಒಳನುಗ್ಗಿದ್ದಾನೆ. ದಾಸೋಹ ಸಮಿತಿ ಕೊಠಡಿಯಲ್ಲಿ ಬೀರುವಿನಲ್ಲಿದ್ದ 18 ಸಾವಿರ, ಎರಡು ಮೊಬೈಲ್ ಮತ್ತು ಕಾಣಿಕೆ ಹುಂಡಿಯಲ್ಲಿದ್ದ ಅಂದಾಜು 50 ಸಾವಿರ ರೂ. ಅಪಹರಿಸಿದ್ದಾನೆ. ಎರಡು ಬೀರುಗಳನ್ನು ಒಡೆದು ಹಾನಿ ಮಾಡಿದ್ದಾನೆ.
ಇದಕ್ಕೂ ಮೊದಲು ರಾಮೇಶ್ವರ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಮಾಧವ ದೇವಸ್ಥಾನದ ಗರ್ಭಗುಡಿಯ ಬಾಗಿಲಿನ ಚಿಲಕ ಮುರಿದು ಒಳನುಗ್ಗಿದ್ದರೂ ಆತನಿಗೆ ಯಾವುದೇ ವಸ್ತು ಸಿಕ್ಕಿಲ್ಲ. ದೇವಸ್ಥಾನದ ಚಂದ್ರಶಾಲೆಯ ಮಾಡಿನ ಹೆಂಚು ತೆಗೆದು ಒಳಗೆ ಇಳಿದಿದ್ದ. ಆದರೆ ಅಲ್ಲಿಯೂ ಯಾವುದೇ ವಸ್ತುಗಳು ಕಳವಾಗಿಲ್ಲ. ಸ್ಥಳಕ್ಕೆ ಆಗುಂಬೆ ಪಿಎಸ್‌ಐ ಶಿವನಗೌಡರ್, ಬೆರಳಚ್ಚು ತಜ್ಞರು ಹಾಗೂ ಶ್ವಾನದಳದ ಸಿಬ್ಬಂದಿ ಭೇಟಿ ನೀಡಿದ್ದರು. ಇತ್ತೀಚೆಗೆ ಪಟ್ಟಣದ ಛತ್ರಕೇರಿಯಲ್ಲಿರುವ ಹೋಟೆಲೊಂದರ ಬಳಿ ಇರುವ ಗೂಡಂಗಡಿಯಲ್ಲಿ ಆರು