

ಮದ್ದೂರು: ಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಅಕುಲ್ ಟೀ ಸ್ಟಾಲ್‌ನಲ್ಲಿ ಕಳ್ಳರು ಕಳ್ಳತನ ಮಾಡಿ ಚಿಲ್ಲರೆ ಕಾಸು, ಚಾಕೊಲೇಟ್ ಹಾಗೂ ಇನ್ನಿತರರ ವಸ್ತುಗಳನ್ನು ದುಷ್ಕರ್ಮಿಗಳು ದೋಚಿ ಪರಾರಿಯಾಗಿದ್ದಾರೆ.
ಶನಿವಾರ ರಾತ್ರಿ ಟೀ ಸ್ಟಾಲ್ ಬೀಗ ಒಡೆದು ಒಳನುಗ್ಗಿರುವ ಕಳ್ಳರು ಕಳ್ಳತನ ನಡೆಸಿದ್ದಲ್ಲದೆ ಟೀ ಸ್ಟಾಲ್‌ನಲ್ಲೇ ಇದ್ದ ಗ್ಯಾಸ್ ಸ್ಟೌ ಬಳಸಿಕೊಂಡು ಟೀ ಮಾಡಿಕೊಂಡು ಕುಡಿದಿದ್ದಾರೆ. ಅಲ್ಲದೆ ಮೊಟ್ಟೆಯಲ್ಲಿ ಆಮ್ಲೆಟ್ ಮಾಡಿಕೊಂಡು ತಿಂದು ನಂತರ ವಸ್ತುಗಳನ್ನು ಕದ್ದು ಪರಾಗಿಯಾಗಿದ್ದಾರೆ.
ಟೀ ಸ್ಟಾಲ್ ಮಾಲೀಕ ಶ್ರೀಕಾಂತ್ ಮಾತನಾಡಿ, ಟೀ ಸ್ಟಾಲ್ ಒಳನುಗ್ಗಿರುವ ಕಳ್ಳರು ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಕಳ್ಳತನ ಮಾಡಿ ಹೋಗಿದ್ದಾರೆ. ಇದರಿಂದ ಸುಮಾರು 10 ಸಾವಿರ ರೂ.ಗೂ ಹೆಚ್ಚು ನಷ್ಟವಾಗಿದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.