ವಧುವಿಗೆ ಹಾರ ಹಾಕುವ ವೇಳೆ ಬಂದ ವರನ ಗೆಳತಿ! ಕಪಾಳಮೋಕ್ಷ ಮಾಡಿ ಕಾಲಲ್ಲಿ ಒದ್ದ ಯುವತಿ; ಮುಂದೇನಾಯ್ತು ಗೊತ್ತೇ? | woman

dk (56)
Published on

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಭಾರತೀಯ ವಿವಾಹಗಳು ತಮ್ಮ ಭವ್ಯತೆ, ಹಾಸ್ಯ ಮತ್ತು ಬಾಲಿವುಡ್​​ ಸಿನಿಮಾಗಳ ಮಾದರಿಯ ಶೈಲಿಯಲ್ಲಿ ಹೆಸರುವಾಸಿಯಾಗಿವೆ.

ಹೌದು, ಕಲ್ಯಾಣ ಮಂಟಪದಲ್ಲಿ ವಧುವಿಗೆ ವರನು ಹಾರ ಹಾಕುವ ವೇಳೆ ಏಕಾಏಕಿ ಬಂದ ವರನ ಗೆಳತಿ ಇದ್ದಕ್ಕಿಂತೆ ರೊಚಿಗೆದ್ದ ಯುವತಿ(woman) ವರನನ್ನು ಹಿಡಿದು ಕಪಾಳಮೋಕ್ಷ ಮಾಡುವ ವಿಡಿಯೋಂದು ಭಾರಿ ವೈರಲ್​ ಆಗಿದೆ. ಆದರೆ, ಇದು ನಾಟಕೀಯವಾಗಿ ನಡೆದಿದೆಯೋ ಅಥವಾ ನೈಜತೆಯೋ ಗೊತ್ತಿಲ್ಲ.  ಈ ವಿಡಿಯೋಗೆ ನೆಟ್ಟಿಗರು ಮಾತ್ರ ತರೆಹವಾರಿ ಕಾಮೆಂಟ್​ ಮಾಡುತ್ತಿದ್ದಾರೆ.

ವಿಡಿಯೋದಲ್ಲಿ ಏನಿದೆ?

ವರನು ವಧುವಿಗೆ ಹಾರ ಹಾಕಲು ಮುಂದಾಗತ್ತಾನೆ. ಇನ್ನೇನು ಹಾರ ಹಾಕುವ ವೇಳೆ ಸ್ಥಳಕ್ಕೆ ಧಾವಿಸಿದ ವರನ ಗೆಳತಿ ಹಾರವನ್ನು ಕಸೆದುಕೊಂಡು ಅವರ ಕೊರಳಪಟ್ಟಿ ಹಿಡಿದು ಕಪಾಳಮೋಕ್ಷ ಮಾಡುತ್ತಾಳೆ. ಮುಂದುವರೆದು ಅವನ್ನು ಏಕಾಏಕಿ ಕಾಲಿನಿಂದ ಒದೆಯುತ್ತಿದ್ದಾಳೆ.ಸ್ಪಲ್ಪ ದೂರ ಹೋಗಿ ಬಿದ್ದ ವರ, ಮೇಲಕ್ಕೆ ಎದ್ದು ಆ ಯುವತಿ ಜತೆ ವಾಗ್ವಾದಕ್ಕೆ ಇಳಿಯುತ್ತಾನೆ. ಸುತ್ತಮುತ್ತಲಿನ ಎಲ್ಲರೂ ದಿಗ್ಭ್ರಂತರಾಗಿದ್ದಾರೆ. ಇಬ್ಬರು ವಾದ ವಿಡಿಯೋದಲ್ಲಿ ಸ್ಪಷ್ಟವಾಗಿಲ್ಲವಾಗಿ ಕೇಳುತ್ತಿಲ್ಲ ಎಂಬುವುದನ್ನು ನಾವು ಇಲ್ಲಿ ಕಾಣಬಹುದು. ಇದೇ ವಿಡಿಯೋ ಭಾರೀ ವೈರಲ್​ ಆಗಿದೆ.

ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವಿಡಿಯೋಗೆ ತರಹೇವಾರಿ ಕಾಮೆಂಟ್ಗಳನ್ನು ಮಾಡಿದ್ದಾರೆ. ಹೌದು, ಒಬ್ಬ ಬಳಕೆದಾರ, ಇದು ಬಾಲಿವುಡ್​ ಚಿತ್ರದಂತೆ ಕಾಣುತ್ತದೆ ಆದರೆ, ಇದು ಸಿನಿಮಾ ಅಲ್ಲ ಎಂದಿದ್ದಾರೆ. ಇನ್ನು ಕೆಲವರು ಇದು ನಿಜ ಆಗಿದ್ದರೆ, ಯುವತಿಗೆ ನ್ಯಾಯ ಸಿಗಬೇಕು ಎಂದು ಒತ್ತಾಯಸಿದ್ದಾರೆ. ಇನ್ನು ಹಲವುರು ಇದು ನಕಲಿ ರೀಲ್ಸ್​ಗಾಗಿ ಕ್ರಿಯೇಟ್​ ಮಾಡಿ ಹರಿಬಿಟ್ಟಿದ್ದಾರೆ ಎಂದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net