ಕತ್ತರಿಸಿದ ಎಡಗೈಯನ್ನು ಬಲಗೈನಲ್ಲೇ ಹಿಡಿದು ಮಾರುಕಟ್ಟೆಯಲ್ಲಿ ತಿರುಗಾಡಿದ ಯುವಕ..

cut hand
Published on

ಸುಲ್ತಾನ್​ಗಂಜ್: 25 ವರ್ಷದ ಯುವಕನೊಬ್ಬ ತನ್ನ ಎಡಗೈಯ ತುಂಡರಿಸಿದ ಭಾಗವನ್ನು ಬಲಗೈಯಲ್ಲಿ ಹಿಡಿದುಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಆಘಾತಕಾರಿ ಘಟನೆ ಬಿಹಾರದ ಭಾಗಲ್ಪುರದ ಸುಲ್ತಾನ್​ಗಂಜ್ ನಗರ ಪ್ರದೇಶದಲ್ಲಿ ನಡೆದಿದೆ.

ಭಾನುವಾರ ತಡರಾತ್ರಿ ಈ ಘಟನೆ ನಡೆದಿದ್ದು, ಕಾಡ್ಗಿಚ್ಚಿನಂತೆ ಹಬ್ಬಿದೆ. ಯುವಕನನ್ನು ಬಂಕಾ ಜಿಲ್ಲೆಯ ಫುಲ್ಲಿಡುಮಾರ್‌ನ ಕೈತಾ ನಿವಾಸಿ ರಾಧೆ ಶ್ಯಾಮ್ ಯಾದವ್ ಎಂಬುವರ ಪುತ್ರ ಸುಮನ್ ಕುಮಾರ್ ಎಂದು ಗುರುತಿಸಲಾಗಿದೆ. ರೈಲಿಗೆ ಡಿಕ್ಕಿ ಹೊಡೆದು ಅವರ ಕೈ ತುಂಡಾಗಿದೆ ಎಂದು ಹೇಳಲಾಗುತ್ತಿದ್ದು, ಕತ್ತರಿಸಿದ ಕೈಯೊಂದಿಗೆ ವ್ಯಕ್ತಿ ಅಲೆದಾಡುತ್ತಿರುವುದನ್ನು ಮಾರುಕಟ್ಟೆಯಲ್ಲಿದ್ದ ಜನರು ವಿಡಿಯೋ ಮಾಡಿದ್ದಾರೆ.

hand

ಯುವಕನ ಕತ್ತರಿಸಿದ ಕೈಯಿಂದ ರಕ್ತ ಸೋರುತ್ತಿದ್ದರೂ ತನಗೇನು ಆಗಿಲ್ಲ ಎನ್ನುವಂತೆ ಯುವಕ ನಡೆದುಕೊಂಡು ಹೋಗುತ್ತಿದ್ದನ್ನು ನೋಡಿ ಸುತ್ತಮುತ್ತಲಿನವರಿಗೆ ಆಶ್ಚರ್ಯವಾಗಿದ್ದು, ಕೂಡಲೇ ಈ ಬಗ್ಗೆ ಜನರು ಸುಲ್ತಂಗಂಜ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಸಾಕಷ್ಟು ಪ್ರಯತ್ನದ ಬಳಿಕ ಯುವಕನನ್ನು ಹಿಡಿದು ಸಂತ್ರಸ್ತನನ್ನು ಉತ್ತಮ ಚಿಕಿತ್ಸೆಗಾಗಿ ಭಾಗಲ್ಪುರಕ್ಕೆ ಕಳುಹಿಸಲಾಗಿದೆ ಮತ್ತು ಘಟನೆಯ ಬಗ್ಗೆ ಆತನ ಸಂಬಂಧಿಕರಿಗೆ ತಿಳಿಸಲಾಗಿದೆ.

ಈ ಕುರಿತು ಮಾತನಾಡಿದ ಪ್ರಭಾರಿ ಪೊಲೀಸ್ ಠಾಣೆ ಅಶೋಕ್ ಕುಮಾರ್ ಸಿಂಗ್, ಗ್ರಾಮದ ಹಿರಿಯರೊಬ್ಬರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು ಆತ ಸುಲ್ತಾನ್​ಗಂಜ್​ಗೆ ಬಂದಿದ್ದಾಗಿಯೂ, ರೈಲು ಇಳಿಯುವ ವೇಳೆ ಆಕಸ್ಮಿಕವಾಗಿ ಜಾರಿಬಿದ್ದು ಕೈ ಕಳೆದುಕೊಂಡಿದ್ದಾಗಿ ಯುವಕ ವಿಚಾರಣೆಯ ವೇಳೆ ಹೇಳಿದ್ದಾನೆ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್)

andhrapradesh

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net