ಯುವಕನಿಂದ ಅಂತರ ಕಾಯ್ದುಕೊಂಡಿದ್ದ ಯುವತಿ: ಬೇಸರಗೊಂಡು ಸಾವಿಗೆ ಶರಣಾದ ಯುವಕ

robbery, investigation, delay,
Published on

ಬೆಂಗಳೂರು: ಪ್ರೇಮ ವೈಫಲ್ಯದಿಂದ ಬೇಸರಗೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಮಹಾಲಕ್ಷ್ಮಿ ಲೇಔಟ್ ಸಮೀಪದ ಜೆ.ಎಸ್.ನಗರದಲ್ಲಿ ಭಾನುವಾರ ನಡೆದಿದೆ.

ಜೆ.ಎಸ್.ನಗರದ ನಿವಾಸಿ ನವೀನ್ (೨೭) ಮೃತ ಯುವಕ. ಮನೆಯಲ್ಲಿ ಮಧ್ಯಾಹ್ನ ೧ ಗಂಟೆ ಸುಮಾರಿಗೆ ಸೀರೆಯಿಂದ ನೇಣು ಬಿಗಿದುಕೊಂಡು ನವೀನ್ ಆತ್ಮಹತ್ಯೆ ಮಾಡಿಕೊಂಡಿದ್ದು, ಕೆಲ ಹೊತ್ತಿನ ಬಳಿಕ ಮೃತನ ಕುಟುಂಬದವರು ಮನೆಗೆ ಮರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಕೊಳ್ಳೆಗಾಲ ತಾಲೂಕು ಚಿಕ್ಕಕಲ್ಲೂರು ಗ್ರಾಮದ ನವೀನ್,ಮಹಾಲಕ್ಷ್ಮೀ ಲೇಔಟ್ ಸಮೀಪದ ಶಂಕರನಗರದಲ್ಲಿ ಬಾಳೇಕಾಯಿ ಮಂಡಿ ಇಟ್ಟಿದ್ದರು. ಜೆ.ಎಸ್.ನಗರದಲ್ಲಿ ಆತನ ಕುಟುಂಬ ನೆಲೆಸಿತ್ತು. ಹಲವು ವರ್ಷಗಳಿಂದ ಯುವತಿಯೊಬ್ಬಳನ್ನು ನವೀನ್ ಪ್ರೀತಿಸುತ್ತಿದ್ದ. ಆದರೆ ಇತ್ತೀಚಿಗೆ ನವೀನ್‌ನಿಂದ ಆಕೆ ಅಂತರ ಕಾಯ್ದುಕೊಂಡಿದ್ದಳು. ಈ ಬೆಳವಣಿಗೆಯಿಂದ ಬೇಸರಗೊಂಡಿದ್ದ ಆತ ಭಾನುವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡೆತ್‌ನೋಟ್‌ನಲ್ಲಿದೆ ಯುವತಿ ಹೆಸರು:
ಡೆತ್‌ನೋಟ್‌ನಲ್ಲಿ ನವೀನ್ ತನ್ನ ಪ್ರೇಮ ಕುರಿತು ಆತನ ಬರೆದಿದ್ದು, ತನ್ನ ಪ್ರಿಯತಮೆ ಮೋಸದಿಂದಲೇ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ನವೀನ್ ಉಲ್ಲೇಖಿಸಿದ್ದಾನೆ. ಈ ಮರಣ ಪತ್ರ ಆಧರಿಸಿ ಯುವತಿ ಮೇಲೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇರೆಗೆ ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net