ಜಗತ್ತು ಕೆಲವರಿಂದ ಪ್ರಾಬಲ್ಯ ಹೊಂದಿದ ವ್ಯವಸ್ಥೆಯಲ್ಲ: ಕೇಂದ್ರ ಸಚಿವ ಜೈಶಂಕರ್| ​Jaishankar

Jaishankar
Published on

Jaishankar: ರಷ್ಯಾದ ಇಂಧನ ಆಮದಿನ ಮೇಲೆ ಅಮೆರಿಕದ ಒತ್ತಡ ಮತ್ತೆ ಹೆಚ್ಚಾಗುತ್ತಿರುವ ನಡುವೆಯೇ ಸಮಾನವಾದ ಜಾಗತಿಕ ಕ್ರಮದ ಅಗತ್ಯವನ್ನು ವಿದೇಶಾಂಗ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ.

ನವದೆಹಲಿಯಲ್ಲಿ ನಡೆದ BIMSTEC ಸಾಂಪ್ರದಾಯಿಕ ಸಂಗೀತ ಉತ್ಸವ ಸಪ್ತಸುರ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ವಿದೇಶಾಂಗ ಸಚಿವ, ನಾವು ಸಂಕೀರ್ಣ ಮತ್ತು ಅನಿಶ್ಚಿತತೆಯಿಂದ ತುಂಬಿದ ಕಾಲದಲ್ಲಿ ವಾಸಿಸುತ್ತಿದ್ದೇವೆ. ನಮ್ಮ ಸಾಮೂಹಿಕ ಬಯಕೆಯೆಂದರೆ ನ್ಯಾಯಯುತ ಜಾಗತಿಕ ಕ್ರಮವನ್ನು ನೋಡುವುದು, ಕೆಲವರ ದೇಶಗಳ ಪ್ರಾಬಲ್ಯವಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ, ನಮ್ಮ ಸಂಪ್ರದಾಯಗಳು ನಿರ್ದಿಷ್ಟ ಮೌಲ್ಯವನ್ನು ಹೊಂದಿವೆ. ನಮ್ಮಂತಹ ರಾಷ್ಟ್ರಗಳಿಗೆ, ಸಂಪ್ರದಾಯಗಳು ನಿಜವಾಗಿಯೂ ಶಕ್ತಿಯ ಉತ್ತಮ ಮೂಲವಾಗಿದೆ ಎಂದಿದ್ದಾರೆ.

1997ರಲ್ಲಿ ಸ್ಥಾಪನೆಯಾದ ಬಹು-ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಬಂಗಾಳ ಕೊಲ್ಲಿ ಉಪಕ್ರಮವು (BIMSTEC), ಆರ್ಥಿಕ ಮತ್ತು ತಾಂತ್ರಿಕ ಸಹಯೋಗವನ್ನು ಬೆಳೆಸಲು ಹಲವು ದೇಶಗಳನ್ನು ಒಟ್ಟುಗೂಡಿಸುತ್ತದೆ.

ಟ್ರಂಪ್ ಆರೋಪಕ್ಕೆ MEA ಪ್ರತಿಕ್ರಿಯೆ ಏನು?

ಯುಕ್ರೇನ್ ಸಂಘರ್ಷದ ಮಧ್ಯೆ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ವಿಚಾರದಲ್ಲಿ ಭಾರತವನ್ನು ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟ ಪ್ರತ್ಯೇಕವಾಗಿ ಟೀಕಿಸುತ್ತಿರುವುದಕ್ಕೆ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಟೀಕಿಸಿದ್ದಾರೆ.

ಮಾಸ್ಕೋ ಜೊತೆಗಿನ ಪಶ್ಚಿಮದ ನಿರಂತರ ವ್ಯಾಪಾರವನ್ನು ಎತ್ತಿ ತೋರಿಸಿದ ಜೈಸ್ವಾಲ್, "ಈ ಹಿನ್ನೆಲೆಯಲ್ಲಿ, ಭಾರತವನ್ನು ಗುರಿಯಾಗಿಸಿಕೊಂಡಿರುವುದು ಅಸಮಂಜಸವಾಗಿದೆ. ಯಾವುದೇ ಪ್ರಮುಖ ಆರ್ಥಿಕತೆಯಂತೆ, ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿ ಮತ್ತು ಆರ್ಥಿಕ ಭದ್ರತೆಯನ್ನು ಕಾಪಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ" ಎಂದು ಸ್ಪಷ್ಟಪಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net