ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಮಹಿಳೆಯರು

Crime Logo
Published on

ಬೆಂಗಳೂರು: ಮಹಿಳೆಯರಿಬ್ಬರು ನಡುರಸ್ತೆಯಲ್ಲೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ಚಪ್ಪಲಿಯಿಂದ ಹೊಡೆದಿದ್ದಾರೆ.
ಯುವಕನಿಗೆ ಥಳಿಸಿದ್ದ ಮಹಿಳೆಯರ ವಿರುದ್ಧ ಅಲ್ಲಿದ್ದ ಪುರುಷರು ತಿರುಗಿ ಬಿದ್ದಿದ್ದಾರೆ. ಮೂರು ದಿನಗಳ ಹಿಂದೆ ಕಬ್ಬನ್ ಪಾರ್ಕ್‌ನಲ್ಲಿ ಈ ಘಟನೆ ನಡೆದಿದೆ.
ಕಬ್ಬನ್ ಪಾರ್ಕ್‌ನಲ್ಲಿ ಯುವಕನೊಬ್ಬ ಪಾರ್ಕಿಂಗ್ ಜಾಗದಿಂದ ಕಾರು ತೆಗೆಯುತ್ತಿದ್ದ. ಇದೇ ವೇಳೆ ಮಹಿಳೆಯರಿಬ್ಬರು ಇದ್ದ ಕಾರು ಯುವಕ ಕಾರಿನ ಮುಂದಕ್ಕೆ ಬಂದಿದೆ. ಈ ವಿಚಾರಕ್ಕೆ ಯುವಕನೊಂದಿಗೆ ಮಹಿಳೆಯರು ವಾಗ್ವಾದಕ್ಕೆ ಇಳಿದಿದ್ದರು. ಈ ವೇಳೆ ಮಾತು ವಿಕೋಪಕ್ಕೆ ತಿರುಗಿದ್ದು, ಯುವಕನ ತಪ್ಪಿಲ್ಲದಿದ್ದರು ಮಹಿಳೆಯರಿಬ್ಬರು ಅಟ್ಟಾಡಿಸಿಕೊಂಡು ಹೊಡೆದು ಹಲ್ಲೆ ಮಾಡಿದ್ದಾರೆ. ಮಾತ್ರವಲ್ಲದೆ ಮಹಿಳೆಯರಿಬ್ಬರು ಯುವಕನಿಗೆ ಚಪ್ಪಲಿಯಿಂದ ಹೊಡೆದು ಅವಮಾನ ಮಾಡಿದ್ದಾರೆ. ಇತ್ತ ಮಹಿಳೆಯರ ವರ್ತನೆಗೆ ಅಲ್ಲಿದ್ದವರು ಆಕ್ರೋಶ ಹೊರಹಾಕಿದರು. ಮಹಿಳೆಯರ ಗೂಂಡಾ ವರ್ತನೆಗೆ ಸಿಟ್ಟಾಗಿ ನಂತರ ಯುವಕನ ಪರವಾಗಿ ನಿಂತಿದ್ದಾರೆ. ಮಹಿಳೆಯರ ಹಾರಾಟ ಹಾಗೂ ಚಿರಾಟಕ್ಕೆ ಸಾರ್ವಜನಿಕರು ವಾಪಾಸ್ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಯಾವುದೇನ ದೂರು ದಾಖಲಾಗಿಲ್ಲ ಎಂದು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net