ಚಕ್ಕಡಿಗಾಡಿ ಓಟದ ಸ್ಪರ್ಧೆ ಯಶಸ್ವಿ

12M.D.R.9
ಮದ್ದುರಿನಲ್ಲಿ ಆಯೋಜಿಸಿದ್ದ ಜೋಡಿ ಹಸುಗಳ ಓಟ ಮತ್ತು ಚಕ್ಕಡಿಗಾಡಿಗಳ ಸ್ಪರ್ಧೆ ಗಮನ ಸೆಳೆಯಿತು.
Published on

ಮದ್ದೂರು: ಸಂಕ್ರಾಂತಿ ಅಂಗವಾಗಿ ತಾಲೂಕಿನ ಮಾರಸಿಂಗನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಮೊದಲನೇ ವರ್ಷದ ರಾಜ್ಯಮಟ್ಟದ ಹಸುಗಳ ಚಕ್ಕಡಿಗಾಡಿ ಓಟದ ಸ್ಪರ್ಧೆ ಯಶಸ್ವಿಯಾಗಿ ನಡೆಯಿತು.

ಜೋಡಿ ಹಸುಗಳ ಓಟದ ಸ್ಪರ್ಧೆ ಮತ್ತು ಎರಡು ಹಲ್ಲು ಮತ್ತು ಹಾಲು ಹಲ್ಲಿನ ಹಸುಗಳ ಚಕ್ಕಡಿಗಾಡಿಗಳ ಸ್ಪರ್ಧೆಗಮನ ಸೆಳೆಯಿತು. ರಾಜ್ಯದ ವಿವಿಧ ಭಾಗಗಳಿಂದ ಸ್ಪರ್ಧಿಗಳು ಆಗಮಿಸಿದ್ದರು.

ಕಸಪಾ ತಾಲೂಕು ಮಾಜಿ ಅಧ್ಯಕ್ಷ ಮಾರಸಿಂಗನಹಳ್ಳಿ ರಾಮಚಂದ್ರ, ಮುಖಂಡರಾದ ಪುರಷೋತ್ತಮ್, ರಾಜು, ಶ್ರೀಕಂಠು, ಪುಟ್ಟ, ಕಿರಣ್‌ಗೂಳೇಶ್, ಚಂದ್ರಶೇಖರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net