ಅಭಿವೃದ್ಧಿ ಅವಾಂತರಕ್ಕೆ ಸಿಲುಕಿ ಕುಸಿಯುತ್ತಿದೆ ಪಶ್ಚಿಮಘಟ್ಟ

Environment Day
ಶಿವಮೊಗ್ಗದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು. ಪ್ರೊ. ಬಿ.ಎಂ.ಕುಮಾರಸ್ವಾಮಿ, ಎನ್.ಚಂದ್ರಶೇಖರಪ್ಪ, ರಮೇಶ್ ಡಿ ನಾಯಕ್, ಶಕುಂತಲಾ ಚಂದ್ರಶೇಖರ್ ಮತ್ತಿತರರಿದ್ದರು.
Published on

ಶಿವಮೊಗ್ಗ: ನಿರಂತರ ಪ್ಲಾಸ್ಟಿಕ್ ಮಾಲಿನ್ಯದಿಂದ ಅನೇಕ ಸಮಸ್ಯೆಗಳು ಎದುರಾಗಿದ್ದು, ಮುಂದಿನ ದಿನಗಳಲ್ಲಿ ಅನೇಕ ಸವಾಲುಗಳು ಎದುರಾಗಲಿವೆ ಎಂದು ಪರಿಸರವಾದಿ ಪ್ರೊ. ಬಿ.ಎಂ.ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದರು.

ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಶಿವಮೊಗ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಅಧ್ಯಯನ ಕೇಂದ್ರ ಮತ್ತು ರೇಡಿಯೋ ಶಿವಮೊಗ್ಗ 90.8, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮತ್ತು ಸ್ಥಳೀಯ ಸಂಸ್ಥೆ ಹಾಗೂ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿದರು. ಪಶ್ಚಿಮಘಟ್ಟ ಅಭಿವೃದ್ಧಿಯ ಅವಾಂತರಕ್ಕೆ ಸಿಕ್ಕಿ ಕುಸಿಯುತ್ತಿದೆ. ಪ್ಲಾಸ್ಟಿಕ್ ಮಾಲಿನ್ಯ ಪಶ್ಚಿಮಘಟ್ಟಕ್ಕೆ ಕಂಟಕವಾಗಿ ಪರಿಣಮಿಸಿದೆ. ಪಶ್ಚಿಮ ಘಟ್ಟದೊಳಗಿರುವ ನಾವು ಇಂತಹ ಸೂಕ್ಷ್ಮತೆಗಳನ್ನು ಗಮನಿಸಬೇಕು. ಇಲ್ಲವಾದರೆ ಭವಿಷ್ಯದಲ್ಲಿ ಪರಿಸರಕ್ಕೆ ಗಂಡಾಂತರ ಎದುರಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು. ಪ್ರಾದೇಶಿಕ ಹಿರಿಯ ಪರಿಸರ ಅಧಿಕಾರಿ ರಮೇಶ್ ಡಿ.ನಾಯಕ್ ಮಾತನಾಡಿ, ಏಕಬಳಕೆ ಪ್ಲಾಸ್ಟಿಕ್‌ಅನ್ನು ರೆಫ್ಯೂಸ್, ರೆಡ್ಯೂಸ್, ರೀಯೂಸ್ ಪರಿಕಲ್ಪನೆಯೊಂದಿಗೆ ಬಳಸಬೇಕಿದೆ ಎಂದು ಸಲಹೆ ನೀಡಿದರು. ಭಾರತ್ ಸ್ಕೌಟ್ ಆ್ಯಂಡ್ ಗೈಡ್ಸ್ ಜಿಲ್ಲಾ ಪ್ರಧಾನ ಆಯುಕ್ತೆ ಶಕುಂತಲಾ ಚಂದ್ರಶೇಖರ್ ಮಾತನಾಡಿದರು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಪರಿಸರ ಅಧ್ಯಯನ ಕೇಂದ್ರದಿಂದ ಆಯೋಜಿಸಿದ್ದ ಚಿತ್ರಕಲೆ, ಪ್ರಬಂಧ ಹಾಗೂ ಸಮೂಹ ಗಾನ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನವನ್ನು ಪರಿಸರ ಅಧ್ಯಯನ ಕೇಂದ್ರದ ದಿನೇಶ್ ಹೊಸನಗರ ವಿತರಿಸಿದರು. ಕಾಲೇಜಿನ ಪ್ರಾಚಾರ್ಯ ಟಿ.ಎಸ್.ಮಹೇಶ್ವರಪ್ಪ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ ಉಪ ಪರಿಸರ ಅಧಿಕಾರಿ ಶಿಲ್ಪಾ, ಪರಿಸರ ಅಧಿಕಾರಿ ವಿ.ರಮೇಶ್, ರೇಡಿಯೋ ಶಿವಮೊಗ್ಗದ ಆರ್‌ಜೆ ಪವಿತ್ರಾ ದಿನೇಶ್, ರಾಧಾ ಸಂತೋಷ್, ಸಹನಾ, ಕೆ.ವಿ.ಚಂದ್ರಶೇಖರಯ್ಯ, ಜಿ.ವಿಜಯಕುಮಾರ್, ಚೂಡಾಮಣಿ ಪವಾರ್, ಶಿವಶಂಕರ್, ಲಕ್ಷ್ಮೀ ಕೆ.ರವಿ, ರಾಜೇಶ್ ವಿ.ಅವಲಕ್ಕಿ ಉಪಸ್ಥಿತರಿದ್ದರು.

ಏಕ ಬಳಕೆಯ ಪ್ಲಾಸ್ಟಿಕ್‌ನಿಂದ ಬಹಳ ದೊಡ್ಡ ಪರಿಣಾಮ ನಮ್ಮೆಲ್ಲರ ಮೇಲೂ ಆಗುತ್ತಿದ್ದು, ಇಂದಿನ ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯಕ್ಕಾಗಿ ಪ್ಲಾಸ್ಟಿಕ್ ಮಾಲಿನ್ಯವನ್ನು ಬಹಳ ದೊಡ್ಡ ಮಟ್ಟದಲ್ಲಿ ನಿಯಂತ್ರಿಸುವ ಕಾರ್ಯಕ್ಕೆ ಮುಂದಾಗಬೇಕು. ಎನ್.ಚಂದ್ರಶೇಖರಪ್ಪ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವಕೀಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net