ಮಳೆಗೆ ಕುಸಿದು ಬಿದ್ದ ಮನೆ ಗೋಡೆ

1
ಬಿರುಗಾಳಿ ಸಹಿತ ಸುರಿದ ಮಳೆಗೆ ಹಳ್ಳದಕೊಪ್ಪಲು ಗ್ರಾಮದಲ್ಲಿ ಮನೆ ಗೋಡೆ ಕುಸಿದು ಬಿದ್ದಿರುವುದು.
Published on

ಧರ್ಮಾಪುರ: ಗುಡುಗು, ಸಿಡಿಲು ಸಹಿತ ಶನಿವಾರ ರಾತ್ರಿ ಸುರಿದ ಮಳೆಗೆ ಧರ್ಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳದಕೊಪ್ಪಲು ಗ್ರಾಮದ ನಿವಾಸಿ ಕೃಷ್ಣೇಗೌಡ ಅವರ ಮನೆ ಗೋಡೆ ಕುಸಿದು ಬಿದ್ದಿದೆ.

ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ದಿನ ಬಳಕೆ ವಸ್ತುಗಳು ಸೇರಿದಂತೆ ರಾಗಿ, ಭತ್ತಕ್ಕೆ ಸ್ವಲ್ಪಮಟ್ಟದ ಹಾನಿಯಾಗಿದೆ. ರಾತ್ರಿ 8 ಗಂಟೆ ಮೇಲೆ ಧರ್ಮಾಪುರ, ಬಿಳಿಕೆರೆ ಹಾಗೂ ಹನಗೋಡು ಭಾಗದಲ್ಲಿ ಉತ್ತಮ ಮಳೆಯಾಗಿದೆ. ಸ್ಥಳಕ್ಕೆ ಭಾನುವಾರ ಗ್ರಾಮ ಲೆಕ್ಕಿಗ, ಸಹಾಯಕರು, ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net