ಮದ್ವೆಗೂ ಮುನ್ನ ಗಂಡು ಮಗುವಿನ ತಾಯಿಯಾಗಿದ್ದ 'ದಿ ವಿಲನ್' ನಟಿ ಆ್ಯಮಿ ಜಾಕ್ಸನ್‌ ಮತ್ತೆ ಮದ್ವೆಗೆ ರೆಡಿ

amy
Published on

 ಬೆಂಗಳೂರು: ಜೋಗಿ ಪ್ರೇಮ್​ ನಿರ್ದೇಶನದ ‘ದಿ ವಿಲನ್​’ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟವರು ನಟಿ ಆ್ಯಮಿ ಜಾಕ್ಸನ್. ಮದುವೆ ಮುನ್ನ ತನ್ನ ಸ್ನೇಹಿತೆಯರ ಜೊತೆ ಪ್ರೈವೇಟ್ ಜೆಟ್‌ನಲ್ಲಿ ಬ್ಯಾಚುಲರ್ ಪಾರ್ಟಿಯನ್ನೂ ಮಾಡಿ ಸಂಭ್ರಮಿಸಿದ್ದಾರೆ. ಈ ಬ್ಯಾಚುಲರ್ ಪಾರ್ಟಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

 Amy Jackson

ಆ್ಯಮಿ ಜಾಕ್ಸನ್ ಮದುವೆ ಮುನ್ನವೇ ಗರ್ಭಿಣಿಯಾಗುವ ಮೂಲಕ ಅನೇಕರನ್ನು ನಿಬ್ಬೇರಗಾಗಿಸಿದ್ದರು. 2018ರಿಂದ ಈಚೆಗೆ ಆ್ಯಮಿ ಜಾಕ್ಸನ್​ ಅವರು ನಟನೆಯಿಂದ ಕೊಂಚ ಬ್ರೇಕ್​ ಪಡೆದುಕೊಂಡಿದ್ದಾರೆ. ಗಂಡು ಮಗುವಿಗೆ ಜನ್ಮ ನೀಡಿರುವ ಅವರು ಸದ್ಯಕ್ಕೆ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ.

 Amy Jackson

ಉದ್ಯಮಿ ಜಾರ್ಜ್‌ ಪನಯಿಟೊ ಜೊತೆ ಕೈ ಹಿಡಿದು ಸುತ್ತಾಡ್ತಾನೇ, ಮದುವೆ ಮುನ್ನವೇ ಗಂಡು ಮಗುಗೆ ಜನ್ಮ ನೀಡಿದ್ದ ಆ್ಯಮಿ ಜಾಕ್ಸನ್ ... ತಮ್ಮಿಬ್ಬರ ಪ್ರೀತಿಯ ಸಂಕೇತವಾದ ಮಗನಿಗೆ ಆ್ಯಮಿ ಜಾಕ್ಸನ್ ಮಗನಿಗೆ ಆ್ಯಂಡ್ರಿಯಾಸ್ ಎಂದು ನಾಮಕರಣ ಮಾಡಿ, ಜಾರ್ಜ್‌ ಜೊತೆ ಸಂಬಂಧ ಕಡಿದುಕೊಂಡರು. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಜಾರ್ಜ್‌ ಜೊತೆ ಇದ್ದ ತಮ್ಮ ಫೋಟೋಗಳನ್ನೆಲ್ಲ ಡಿಲೀಟ್ ಮಾಡಿದ್ದರು.

ಮದುವೆ ಮುನ್ನವೇ ಗಂಡು ಮಗುಗೆ ಜನ್ಮ ನೀಡಿದ್ದ ಆ್ಯಮಿ ಜಾಕ್ಸನ್  ಜಾರ್ಜ್‌ ಜೊತೆ ಸಂಬಂಧ ಕಡಿದುಕೊಂಡರು. ಹೀಗೆ ಜಾರ್ಜ್ ಇಂದ ದೂರವಾದ ಆ್ಯಮಿ ಜಾಕ್ಸನ್ ಈಗ ಬ್ರಿಟನ್ ನಟ ಎಡ್ ವೆಸ್ಟ್ವಿಕ್ ಜತೆ ಮದುವೆಯಾಗಲು ಸಿದ್ಧರಾಗಿದ್ದಾರೆ.

ಮದುವೆ ಮುನ್ನ ತನ್ನ ಸ್ನೇಹಿತೆಯರ ಜೊತೆ ಪ್ರೈವೇಟ್ ಜೆಟ್‌ನಲ್ಲಿ ಬ್ಯಾಚುಲರ್ ಪಾರ್ಟಿಯನ್ನೂ ಮಾಡಿ ಸಂಭ್ರಮಿಸಿದ್ದಾರೆ. ಈ ಬ್ಯಾಚುಲರ್ ಪಾರ್ಟಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಮೂಲತಃ ಲಂಡನ್​ನವರಾದ ಆ್ಯಮಿ ಜಾಕ್ಸನ್​ಗೆ ಭಾರತೀಯ ಚಿತ್ರರಂಗದಲ್ಲಿ ದೊಡ್ಡಮಟ್ಟದ ಯಶಸ್ಸು ಸಿಕ್ಕಿತು. ಈಗ ಅವರು ಲಂಡನ್​ನಲ್ಲಿಯೇ ವಾಸವಾಗಿದ್ದಾರೆ. ಮಾಡೆಲಿಂಗ್​ ಜಗತ್ತಿನಲ್ಲಿ ಅವರು ಸಕ್ರಿಯರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net