ನೆಬ್ಬೂರು ಗೌಡ ಸಂಘದ ಹುತ್ತರಿ ಸಂತೋಷಕೂಟ

18.npk-1
ನೆಬ್ಬೂರು ಗೌಡ ಸಂಘದ ಹುತ್ತರಿ ಊರೋರ್ಮೆ ಸಂತೋಷಕೂಟ ಕಾರ್ಯಕ್ರಮವನ್ನು ಕಟ್ರತನ ಪ್ರಸಾದ್ ಉದ್ಘಾಟಿಸಿದರು.
Published on

ನಾಪೋಕ್ಲು: ಇಲ್ಲಿಗೆ ಸಮೀಪದ ನೆಬ್ಬೂರು ಗೌಡ ಸಂಘದ ಹುತ್ತರಿ ಊರೋರ್ಮೆ ಸಂತೋಷಕೂಟ ಕಟ್ರತನ ಬಾಣೆಯಲ್ಲಿ ವಿವಿಧ ಕ್ರೀಡೆ ಹಾಗೂ ಸಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ನಡೆಯಿತು.

ಪೊನ್ನಚನ, ಕೊಟ್ಟಕೇರಿಯನ ಮತ್ತು ಕಟ್ರತನ ಕುಟುಂಬಗಳು ಒಟ್ಟುಗೂಡಿ ನಡೆಸಿಕೊಂಡು ಬರುತ್ತಿರುವ ಹುತ್ತರಿ ಊರೋರ್ಮೆ ಕೂಟದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕಟ್ರತನ ಲೋಕನಾಥ್ ವಹಿಸಿದ್ದರು. ಕಾರ್ಯಕ್ರಮವನ್ನು ಕಟ್ರತನ ಪ್ರಸಾದ್ ಉದ್ಘಾಟಿಸಿದರು. ವಾರ್ಷಿಕ ವರದಿಯನ್ನು ಸಂಘದ ಕಾರ್ಯದರ್ಶಿ ಪೊನ್ನಚ್ಚನ ರೋಹಿತ್ ನಿರ್ವಹಿಸಿದರು.

ಮಡಿಕೇರಿ ತಾಲೂಕು ವಕೀಲರ ಸಂಘದ ಮಾಜಿ ಅಧ್ಯಕ್ಷ ಕೊಟ್ಟ ಕೇರಿಯನ ದಯಾನಂದ , ಕಟ್ರತನ ರೋಹಿಣಿ, ಕೊಟ್ಟಕೇರಿಯನ ಧರ್ಮೇಂದ್ರ,ಪೊನ್ನಚ್ಚನ ಡೈಸಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net