ಬಿಸಿಲ ಬೇಗೆಗೆ ಬಳಲಿದ ವ್ಯಕ್ತಿಯ ದಾಹ ತೀರಿಸಿದ ಕಾಡಾನೆ! ಮನಮುಟ್ಟುವ ವಿಡಿಯೋ ವೈರಲ್​

Elephant
Published on

ಇದೀಗ ಎಲ್ಲೆಡೆ ಉರಿ ಬಿಸಿಲು ಸುಡುತ್ತಿದೆ. ಬೇಸಿಗೆ ಬಿಸಿ ನೆತ್ತಿಗೆ ಅಪ್ಪಳಿಸುತ್ತಿದ್ದು, ಮಾನವರು ಮಾತ್ರವಲ್ಲದೆ, ಜೀವಿಗಳೂ ಕೂಡ ತೀವ್ರ ತಾಪಕ್ಕೆ ನರಳುತ್ತಿವೆ. ಕಾಡಿನಲ್ಲಿ ಕುಡಿಯುವ ನೀರಿನ ಕೊರತೆ ಇರುವ ಕಾರಣ ಮೂಕ ಪ್ರಾಣಿ, ಪಕ್ಷಿಗಳ ಬಾಯಾರಿಕೆಯನ್ನು ನೀಗಿಸಲು ಟ್ಯಾಂಕರ್​​ ಮೂಲಕ ನೀರಿನ ಹೊಂಡಗಳನ್ನು ತುಂಬುವ ಕೆಲಸ ಮಾಡಲಾಗುತ್ತಿದೆ. ಹಳ್ಳಿ ಮತ್ತು ನಗರ ಪ್ರದೇಶಗಳಲ್ಲಿ ಪಾತ್ರೆಗಳಲ್ಲಿ ನೀರಿಡುವ ಮೂಲಕ ಜೀವಿಗಳ ಬಾಯಾರಿಕೆ ತಣಿಸಲಾಗುತ್ತಿದೆ. ಆದರೆ ಮಹಾರಾಷ್ಟ್ರದಲ್ಲಿ ನಡೆದ ಘಟನೆಯೊಂದು ಇದಕ್ಕೆ ತದ್ವಿರುದ್ಧವಾಗಿದೆ. ಇಲ್ಲಿಯವರೆಗೆ ಬಾಯಾರಿದ ಮೂಕ ಪ್ರಾಣಿಗಳಿಗೆ ನೀರು ಕೊಡುವುದನ್ನು ನೋಡುತ್ತಿದ್ದೆವು. ಇದೀಗ ಇತ್ತೀಚೆಗೆ ನಡೆದ ಘಟನೆಯೊಂದರಲ್ಲಿ ಆನೆಯೊಂದು ಮನುಷ್ಯನ ದಾಹ ತೀರಿಸಿದೆ.

ಸಾಮಾನ್ಯವಾಗಿ ಮನುಷ್ಯರು ಬಾಯಾರಿದ ಮೂಕಪ್ರಾಣಿಗಳಿಗೆ ನೀರು ಕೊಡುವುದನ್ನು ನೋಡುತ್ತೇವೆ. ಆದರೆ, ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ನಡೆದ ಘಟನೆಯೊಂದರಲ್ಲಿ ಆ ದೃಶ್ಯ ಕೊಂಚ ಉಲ್ಟಾ ಆಗಿದೆ. ಆನೆಯೊಂದು ಮನುಷ್ಯನ ಬಾಯಾರಿಕೆಯನ್ನು ನೀಗಿಸಿದೆ. ಸದ್ಯ ಈ ಸಂಬಂಧ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಸಲಿಗೆ ಏನಾಯಿತೆಂದರೆ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಅಹೇರಿ ತಾಲೂಕಿನ ಕಮಲಾಪುರದ ಆನೆ ಉದ್ಯಾನವನದ ಬಳಿ ಇರುವ ಹ್ಯಾಂಡ್ ಪಂಪ್‌ ಅನ್ನು ಆನೆ ಬಡಿಯುತ್ತಿದ್ದಾಗ ಉದ್ಯಾನವನದ ಕಾವಲುಗಾರ ಸುದೀಪ್ ನೀರು ಕುಡಿದು ದಾಹ ತೀರಿಸಿಕೊಂಡಿದ್ದಾರೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಆನೆ, ಮನುಷ್ಯನಂತೆ ಕೈ ಪಂಪ್ ಮಾಡುತ್ತಿದೆ ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಈ ಆನೆ ಉದ್ಯಾನವನದಲ್ಲಿ ಪ್ರಸ್ತುತ 9 ಸಣ್ಣ ಮತ್ತು ದೊಡ್ಡ ಆನೆಗಳಿವೆ. ಬೇಸಿಗೆ ಕಾಲದಲ್ಲಿ ಕಾಡಿನ ಸುತ್ತಮುತ್ತಲಿನ ನೀರಿನ ಮೂಲಗಳು ಬತ್ತಿಹೋದಾಗ ಆನೆಗಳು ಹೀಗೆ ಮಾಡುತ್ತವೆ ಎನ್ನುತ್ತಾರೆ ಶಿಬಿರದ ಆಯೋಜಕರು. ಆದರೆ ಏನೇ ಇರಲಿ ಆನೆ ಅರ್ಥ ಮಾಡಿಕೊಂಡು ಮನುಷ್ಯನ ದಾಹ ತೀರಿಸುವುದೇ ಶ್ರೇಷ್ಠ ಎಂದು ನೆಟ್ಟಿಗರು ಆನೆಯನ್ನು ಕೊಂಡಾಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net