ದೇವಸ್ಥಾನದ ಸಿಬ್ಬಂದಿ ಹತ್ಯೆಯ ವಿಡಿಯೋ ವೈರಲ್​: ಛೀಮಾರಿ ಹಾಕಿದ ಬಾಲಿವುಡ್​ ನಟಿ ಸ್ವರಾ ಭಾಸ್ಕರ್​! | Swara Bhasker

untitled-design-2025-09-01t120555292-68b53ecfa6e42
Published on

Swara Bhasker : ದೆಹಲಿಯ ಕಲ್ಕಾಜಿ ದೇವಸ್ಥಾನದಲ್ಲಿ ಸೇವಾದಾರನನ್ನು ಒಂದು ಗುಂಪು ಹಲ್ಲೆ ನಡೆಸಿ ಹತ್ಯೆಗೈದಿರುವ ವಿಡಿಯೋಗೆ ಬಾಲಿವುಡ್​ ನಟಿ ಸ್ವರಾ ಭಾಸ್ಕರ್​ ಸೋಮವಾರ (ಸೆಪ್ಟೆಂಬರ್​ 1) ಛೀಮಾರಿ ಹಾಕಿ "ಘೋರ ಮತ್ತು ಭಯಾನಕ" ಎಂದು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.

ನಟಿ ಈ ಹಿಂಸಾಚಾರದ ಬಗ್ಗೆ ತಮ್ಮ ಅಧಿಕೃತ ಎಕ್ಸ್​ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ಈ ಘಟನೆಯು ಸಂಪೂರ್ಣವಾಗಿ ಘೋರ ಮತ್ತು ಭಯಾನಕವಾಗಿದೆ!!!. ಜನರನ್ನು ಹೊಡೆದು ಸಾಯಿಸುವುದು ಭಾರತದಲ್ಲಿ ರೂಢಿಯಾಗಿದೆ. ಇದು ಮನಕುಲವೇ ಬೆಚ್ಚಿಬೀಳಿಸುವಂತ ಘಟನೆ ಆಗಿದ್ದು, ನಮ್ಮ ಸಮಾಜಕ್ಕೆ ಈ ರೀತಿ ತೊಂದರೆ ಕೊಡುವುದು ನಿಜವಾಗಿಯೂ ನಾಚಿಕೆಗೇಡಿನ ಸಂಗತಿ. ನಾವು ರಾಕ್ಷಸರಾಗಿ ಬದಲಾಗುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ಘಟನೆ ಹಿನ್ನಲೆ?

ಶುಕ್ರವಾರ (ಆಗಸ್ಟ್ 29) ತಡರಾತ್ರಿ ಘಟನೆ ನಡೆದಿದ್ದು, ಪ್ರಸಾದ ವಿತರಣೆಯ ವಿವಾದ ಹಿಂಸಾತ್ಮಕ್ಕೆ ತಿರುಗಿದೆ. ಇನ್ನು ದೇವಸ್ಥಾನದಲ್ಲಿ ಸುಮಾರು 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಯೊಗೀಂದ್ರ ಸಿಂಗ್ ಬಳಿ ಒಂದು ಗುಂಪು ಪ್ರಸಾದಕ್ಕಾಗಿ ಬೇಡಿಕೆ ಇಟ್ಟಿದೆ. ಆಗ ಸಿಂಗ್​ ದಾಸ್ತಾನು ಖಾಲಿಯಾಗಿದೆ ಎಂದು ಹೇಳಿದ್ದು, ಈ ವಿವಾದಕ್ಕೆ ಕಾರಣವಾಗಿದೆ.

ಸ್ಥಳೀಯರ ಪ್ರಕಾರ, ವಾದ ವಿವಾದದ ನಂತರ ಆ ಗುಂಪು ಸಿಂಗ್​ನನ್ನು ಎಳೆದುಕೊಂಡು ಹೋಗಿ ಕೋಲಿನಿಂದ ಹಲ್ಲೆ ಮಾಡಿ ಹತ್ಯೆಗೈದಿದ್ದಾರೆ. ಇನ್ನು ಆತ ನೆಲದ ಮೇಲೆ ಬಿದ್ದರೂ ಸಹ ನಿರ್ದಯವಾಗಿ ಥಳಿಸುತ್ತಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೂ 5 ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನು ಆರೋಪಿ ಅತುಲ್​ ಪಾಂಡೆಯನ್ನು ಸ್ಥಳೀಯರು ಸ್ಥಳದಲ್ಲೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನು ಇತರ 4 ಆರೋಪಿಗಳನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ. ಈ ಕ್ರೂರ ಹತ್ಯೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆಯೇ ಆಕ್ರೋಶಕ್ಕೆ ಕಾರಣವಾಗಿದ್ದು, ಅನೇಕರು ತ್ವರಿತ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.

(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net