

ಆಂಧ್ರಪ್ರದೇಶ: ನವಜಾತ ಶಿಶುವನ್ನು ಚೀಲದಲ್ಲಿ ತುಂಬಿಕೊಂಡು ಹೋಗುತ್ತಿದ್ದ ವೃದ್ಧನೊಬ್ಬ ಸಿಕ್ಕಿಬಿದ್ದಿದ್ದಾನೆ. ಕೊಂಡಪಲ್ಲಿಯಲ್ಲಿ ಈ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ.
ಮಗುವನ್ನು ಬ್ಯಾಗ್ನಲ್ಲಿ ಹಾಕಿಕೊಂಡು ಆಟೋದಲ್ಲಿ ಹೋಗುತ್ತಿದ್ದಾಗ ಮಗು ಇದ್ದಕ್ಕಿದ್ದಂತೆ ಅಳುತ್ತಿತ್ತು . ಬ್ಯಾಗ್ ನಿಂದ ಶಬ್ದ ಬರುತ್ತಿದ್ದಂತೆ ಆಟೋ ಚಾಲಕ ಆಟೋ ನಿಲ್ಲಿಸಿ ಪರಿಶೀಲಿಸಿದ್ದಾನೆ. ಚೀಲದಲ್ಲಿ ಮಗು ನೋಡಿದ ಅವರು ಆಘಾತಕ್ಕೊಳಗಾದರು. ವೃದ್ಧನನ್ನು ಹಿಡಿದು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು.
ಪೋಲಿಸರು ವೃದ್ಧನ ವಿವರಗಳನ್ನು ದೂರವಾಣಿ ಮೂಲಕ ಸಂಗ್ರಹಿಸಿ ಆ ದಿಸೆಯಲ್ಲಿ ತನಿಖೆ ಆರಂಭಿಸಿದರು. ಆದರೆ, ಪೊಲೀಸರ ವಿಚಾರಣೆ ವೇಳೆ ಬೆಚ್ಚಿಬೀಳಿಸುವ ಸಂಗತಿಗಳು ಬೆಳಕಿಗೆ ಬಂದಿವೆ. ಮಗುವನ್ನು ಎಲ್ಲಿಂದ ತರಲಾಗಿದೆ ಎಂದು ತಿಳಿದು ಬೆಚ್ಚಿಬಿದ್ದರು.
ಐದು ದಿನಗಳ ಹಿಂದೆ ಜಂಗಾರೆಡ್ಡಿಗುಡೆಂನ ಮಹಿಳೆಯೊಬ್ಬರು ವಿಜಯವಾಡದ ಖಾಸಗಿ ಆಸ್ಪತ್ರೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಆಸ್ಪತ್ರೆಯಲ್ಲಿದ್ದ ನರ್ಸ್ ಸಹಾಯದಿಂದ ದಂಪತಿ ಮಗುವನ್ನು ಕಳ್ಳತನ ಮಾಡಿದ್ದರು. ವೃದ್ಧ ಮಗುವನ್ನು ಹೊತ್ತೊಯ್ಯುತ್ತಿರುವುದನ್ನು ಗಮನಿಸಿದ ಆಟೋ ಚಾಲಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಹಾಗಾಗಿ ಈ ವಿಷಯ ಹೊರಬಿದ್ದಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. ಮಗುವನ್ನು ಕದ್ದು ಎಲ್ಲಿಗೆ ಸಾಗಿಸುತ್ತುದ್ದರು ಎನ್ನುವುದು ತಿಳಿಯಬೇಕಾಗಿದೆ.