

ಗದಗ: ಆರು ಮಂದಿ ವಿದ್ಯಾರ್ಥಿಗಳ ಮಕ್ಕಳ ಕೂದಲು ಕಟ್ ಮಾಡಿದ್ದ ಕಂಪ್ಯೂಟರ್ ಶಿಕ್ಷಕನಿಗೆ ಧರ್ಮದೇಟು ನೀಡಿದ ಘಟನೆ ನಗರದ ಬೆಟಗೇರಿ ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಬಿನೋಯ್ ಎಂಬ ಶಿಕ್ಷಕ ಸ್ಕೂಲ್ ಮಕ್ಕಳ ಹೇರ್ ಕಟ್ ಮಾಡುವ ಮೂಲಕ ಉದ್ಧಟತನ ಮೆರೆದಿದ್ದ. ಕೂದಲು ಕಟ್ ಮಾಡುವ ವೇಳೆ ವಿದ್ಯಾರ್ಥಿ ಹಣೆಗೆ ಗಾಯವಾಗಿದೆ. 7ನೇ ತರಗತಿ ವಿದ್ಯಾರ್ಥಿಗೆ ಬೆನೋಯ್ ಕತ್ತರಿಯಿಂದ ಗಾಯ ಮಾಡಿದ್ದಾರೆ. ಶಿಕ್ಷಕ ಬೆನೋಯ್ ವರ್ತನೆಗೆ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.
ಮೊದಲು ಶಿಕ್ಷಕನಾದವರು ಚೆನ್ನಾಗಿರಬೇಕು. ಶಿಕ್ಷಕನಾದವರು ಹೆಬ್ಬುಲಿ ಕಟಿಂಗ್ ಮಾಡಿಸಿಕೊಂಡಿದ್ವಿ ಮಕ್ಕಳಿಗೆ ಕಟಿಂಗ್ ಮಾಡಿಸಿಕೊಂಡು ಬಾ ಎನ್ನುವುದು ಯಾವ ನ್ಯಾಯ ಮೊದಲು ನೀನು ಸರಿಯಾಗಿರು ಎಂದು ಕೂಡಿದ ಜನರು ಬಿಇಒ ಸಮ್ಮುಖದಲ್ಲೇ ಶಿಕ್ಷಕನಿಗೆ ಧರ್ಮದೇಟು ನೀಡಿದರು.
ಬಳಿಕ ಬೆನೋಯ್‌ನ್ನು ವಜಾಗೊಳಿಸುವಂತೆ ಪಾಲಕರು ಆಗ್ರಹಿಸಿದ್ದಾರೆ. ದುರ್ವರ್ತನೆ ತೋರಿದ ಶಿಕ್ಷಕನ ಬಗ್ಗೆ ಬಿಇಒ ಅಧಿಕಾರಿ ವರದಿ ಪಡೆದಿದ್ದಾರೆ. ಮೇಲಾಧಿಕಾರಿಗಳಿಗೆ ವರದಿ ನೀಡಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಗದಗ ಶಹರ ಬಿಇಒ ಆರ್‌ಎಸ್ ಬುರಡಿ ಮಾಹಿತಿ ನೀಡಿದ್ದಾರೆ.