ವಿದ್ಯಾರ್ಥಿಗಳ ಸಾಧನೆಯಿಂದ ಗುರುವಿಗೆ ಸಂತಸ

guruvandane
ಆನಂದಪುರ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಗುರುವಂದನಾ ಮತ್ತು ಸ್ನೇಹಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸದಾನಂದ ನಾಯಕ್, ಜಿ.ಎಸ್.ಉಜ್ಜಪ್ಪ, ಸುನಂದಾ ಪಂಡಿತ. ರಾಧಾಕೃಷ್ಣ, ಗುರುರಾಜ್, ಎಂ.ಸಿ.ಮೂರ್ತಿ, ಗಣೇಶ್ ಆರ್.ಭಟ್ ಇದ್ದರು.
Published on

ಆನಂದಪುರ: ಗುರುಗಳು ಸದಾ ವಿದ್ಯಾರ್ಥಿಗಳ ಶ್ರೇಯಸ್ಸು ಬಯಸುತ್ತಾರೆ. ಶಿಕ್ಷಣ ಪಡೆದ ವಿದ್ಯಾರ್ಥಿಯು ಸಾಧನೆ ಮಾಡಿದರೆ ಗುರುಗಳು ಸಂತೋಷ ಅನುಭವಿಸುತ್ತಾರೆ ಎಂದು ನಿವೃತ್ತ ಶಿಕ್ಷಕ ಸದಾನಂದ ನಾಯಕ್ ಹೇಳಿದರು.

ಪಬ್ಲಿಕ್ ಶಾಲೆಯಲ್ಲಿ ಅಧ್ಯಯನ ಮಾಡಿದ್ದ ವಿದ್ಯಾರ್ಥಿಗಳು ಏರ್ಪಡಿಸಿದ್ದ ಗುರುವಂದನಾ ಹಾಗೂ ಸ್ನೇಹಮಿಲನ ಕಾರ್ಯಕ್ರಮದಲ್ಲಿ ಮಾತನಾಡಿ, ಗುರುಹಿರಿಯರು, ತಂದೆ-ತಾಯಿಯನ್ನು ಗೌರವ, ಪ್ರೀತಿಯಿಂದ ನೋಡಿಕೊಂಡ ವಿದ್ಯಾರ್ಥಿಗಳು ಯಶಸ್ಸಿನ ಶಿಖರ ತಲುಪಿದ ಅನೇಕ ಉದಾಹರಣೆಗಳಿವೆ ಎಂದು ತಿಳಿಸಿದರು.
ಪ್ರತಿಯೊಬ್ಬರು ಸಂಪಾದನೆ ಜತೆಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಾಗ ತೃಪ್ತಿ ಸಿಗುತ್ತದೆ. ನಮ್ಮ ಶಾಲೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮತ್ತು ಸೇವಾ ಕಾರ್ಯ ನಡೆಸುತ್ತಿರುವುದು ತುಂಬ ಸಂತೋಷ ತಂದಿದೆ ಎಂದು ಅಭಿಪ್ರಾಯಪಟ್ಟರು.
ನಿವೃತ್ತ ಶಿಕ್ಷಕ ಜಿ.ಎಸ್.ಉಜ್ಜಪ್ಪ ಮಾತನಾಡಿ, ಶಿಕ್ಷಣದ ಜತೆಗೆ ಜೀವನ ಸಂಸ್ಕಾರ ಮತ್ತು ಮೌಲ್ಯವನ್ನು ಕಲಿಸಿದರೆ ವಿದ್ಯಾರ್ಥಿಗಳು ಸಮಾಜದ ಪ್ರಮುಖ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ. ಅಂತಹ ಶಿಕ್ಷಣ ನೀಡಿದ ಸಾರ್ಥಕ್ಯ ನಮಗಿದೆ ಎಂದರು.
1987ರಿಂದ 1998ರವರೆಗೆ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಿವೃತ್ತ ಶಿಕ್ಷಕಿ ಸುನಂದಾ ಪಂಡಿತ, ಶಿಕ್ಷಕ ರಾಧಾಕೃಷ್ಣ, ಗುರುರಾಜ್, ಎಂ.ಸಿ.ಮೂರ್ತಿ, ಗಣೇಶ ಆರ್. ಭಟ್, ಅಂತೋನಿಯಪ್ಪ, ಎಸ್.ಬಿ.ಕೊಟ್ರಪ್ಪ, ನಾಗರಾಜ್, ಮಹೇಶ ಎಲಿಗಾರ್, ಎಸ್.ಎನ್.ಹೆಗಡೆ, ದ್ಯಾವಪ್ಪ, ಚಂದ್ರಕಲಾ, ಮರಿಯಮ್ಮ, ಸರೋಜಾ, ಗಾಯತ್ರಿ, ಬೋಗೇಶ್ವರಪ್ಪ, ಭಾಗ್ಯಶ್ರೀ, ಚಿದಂಬರ್, ಶಾಂತಕುಮಾರಿ, ಜಯಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net