ಆನೆ ದಂತ ಸಾಗಾಟ, ಸೆರೆ ಸಿಕ್ಕ ಕತೆಯೇ ರೋಚಕ

arrest (5)
Published on

ಬೆಂಗಳೂರು: ಕಾರಿನಲ್ಲಿ 9 ಆನೆ ದಂತದ ತುಂಡುಗಳ ಸಾಗಾಟ ಮಾಡುತ್ತಿದ್ದ ಎಂಟು ಆರೋಪಿಗಳನ್ನು ಅರಣ್ಯ ಸಂಚಾರ ದಳದ ಅಧಿಕಾರಿಗಳು ಬಂಧಿಸಿದ್ದಾರೆ.

ತಮಿಳುನಾಡು ಮೂಲದ ಐಯ್ಯನಕುಟ್ಟಿ ಕುಜಂತಾಯ್ (53), ಯು. ರತ್ನ (46), ಕೃಷ್ಣಮೂರ್ತಿ ಗೋಪಾಲ್ (35), ಎಂ. ರವಿ (44), ಸುಬ್ರಮಣ್ಯಪುರದ ನಾರಾಯಣಸ್ವಾಮಿ (50), ಕೊಡಿಗೇಹಳ್ಳಿಯ ಎ. ದಿನೇಶ್ (42), ಎಸ್. ಮನೋಹರ್ ಪಾಂಡೆ (61) ಮತ್ತು ಎಂ. ವೆಂಕಟೇಶ್ (51) ಬಂಧಿತರು.

ಆರೋಪಿಗಳಿಂದ ಆನೆ ದಂತದ ತುಂಡುಗಳು, ಮೊಬೈಲ್, ಜೀಪ್ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅ.10ರಂದು ರಾಮನಗರ ಜಿಲ್ಲೆ ಕೋಡಿಹಳ್ಳಿ-ಹುಣಸನಹಳ್ಳಿ ವ್ಯಾಪ್ತಿಯಲ್ಲಿ ಮಹೀಂದ್ರ ಜೈಲೋ ಕಾರಿನಲ್ಲಿ ಆನೆ ದಂತ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಅರಣ್ಯಾಧಿಕಾರಿಗಳ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ವಾಹನ ತಪಾಸಣೆ ನಡೆಸಿದಾಗ 9 ಆನೆ ದಂತದ ತುಂಡುಗಳು ಪತ್ತೆಯಾಗಿವೆ. ಆನೆ ದಂತದ ತುಂಡುಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net