

ರಾಣೆಬೆನ್ನೂರ: ದ್ವೀತಿಯ ಪಿಯುಸಿ ಪರೀೆಯ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 3ನೇ ಸ್ಥಾನ ಪಡೆದ ರಾಣೆಬೆನ್ನೂರಿನ ಖನ್ನೂರ ವಿದ್ಯಾನಿಕೇತನ ಪಿಯು ಕಾಲೇಜ್ನ ವಿದ್ಯಾಥಿರ್ನಿ ಕ್ಷಮಾ ಪೂಜಾರ ಅವರನ್ನು ಉಪನ್ಯಾಸಕರ ಹಾಗೂ ಪ್ರಾಚಾರ್ಯರ ಸಂಘ ವತಿಯಿಂದ ಭಾನುವಾರ ಸನ್ಮಾನಿಸಲಾಯಿತು. ಪ್ರಭಾರ ಡಿಡಿಪಿಯು ಬಸವರಾಜ ಇಟ್ಟಿಗುಡಿ, ಪ್ರಾಚಾರ್ಯರ ಸಂಘದ ಅಧ್ಯಕ್ಷ ನಾಗರಾಜ ದ್ಯಾಮನಕೊಪ್ಪ, ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್.ಎಸ್. ನಿಸ್ಸಿಮಗೌಡರ, ಪ್ರಮುಖರಾದ ಪ್ರಕಾಶ ಬಾರಕೇರ, ಎಚ್. ಶಿವಾನಂದ, ಎಸ್.ಪಿ. ಪೂಜಾರ, ಪ್ರಕಾಶ ಕುಂಟೇರ, ಕರಬಸಪ್ಪ ಉಕ್ಕುಂದ ಮತ್ತಿತರರಿದ್ದರು.