ಬಡ್ತಿ ಅಂಕ ಇಳಿಕೆ ಶಿಕ್ಷಕರಿಗೆ ಸಿಹಿ ನೀಡಿದ ರಾಜ್ಯ ಸರ್ಕಾರ

vda
Published on

ಬೆಂಗಳೂರು: ಶಿಕ್ಷಕರ ಬಹುದಿನಗಳ ಬೇಡಿಕೆಯನ್ನು ರಾಜ್ಯ ಸರ್ಕಾರ ಈಡೇರಿಸಿದ್ದು, ಪದವಿ ಪೂರ್ವ ಕಾಲೇಜು ಉಪನ್ಯಾಸಕರಾಗಿ ಬಡ್ತಿ ಪಡೆಯಲು ಇದ್ದ ಅಡ್ಡಿಯನ್ನು ನಿವಾರಿಸಿದೆ. ಈ ಸಂಬಂಧ ಶುಕ್ರವಾರ ನಡೆದ ರಾಜ್ಯ ಸಂಪುಟ ಸಬೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ಪದವಿ ಪೂರ್ವ ಕಾಲೇಜು ಹುದ್ದೆಗೆ ಬಡ್ತಿ ನೀಡಲು ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ.55 ಅಂಕ ಪಡೆಯಬೇಕಿತ್ತು. ಇದನ್ನು ಪರಿಷ್ಕರಿಸಿ ಶೇ.50ಕ್ಕೆ ಇಳಿಕೆ ಮಾಡಲಾಗಿದೆ. ಇದಕ್ಕಾಗಿ ಪದವಿಪೂರ್ವ ಕಾಲೇಜು ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ಸಾಮಾನ್ಯ ಸೇವೆಗಳು (ಪದವಿ ಪೂರ್ವ ಶಿಕ್ಷಣ) (ನೇಮಕಾತಿ) (ತಿದ್ದುಪಡಿ) ನಿಯಮಗಳು, 2024ಕ್ಕೆ ತರಲಾಗಿದ್ದ ತಿದ್ದುಪಡಿಗೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಈ ಮೂಲಕ ಶಿಕ್ಷಕರಿಗೆ ಅನುಕೂಲ ಕಲ್ಪಿಸಲಾಗಿದ್ದು, ಉಪನ್ಯಾಸಕರ ಕೊರತೆ ನಿಗುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ.

ವಯೋಮಿತಿ ವಿನಾಯ್ತಿ: 2017-18ನೇ ಸಾಲಿಗೆ ಗೆಜೆಟೆಡ್ ಪೊ›ಬೆಷನರಿ ನೇಮಕಾತಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳಿಗೆ 2023-24 ಸಾಲಿನೆ ಗೆಜೆಟೆಡ್ ಪೊ›ಬೆಷನರ್ಸ್ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಒಂದು ಬಾರಿಗೆ ವಯೋಮಿತಿಯ ನಿರ್ಬಂಧವನ್ನು ಸಡಿಲಿಸಿ ಹೆಚ್ಚುವರಿ ವಿಶೇಷ ಅವಕಾಶ ನೀಡಲು ಸರ್ಕಾರ ಜೂನ್ 21ರಂದು ಆದೇಶ ಹೊರಡಿಸಿತ್ತು. ಸಚಿವ ಸಂಪುಟ ಸಭೆ ಈ ಆದೇಶಕ್ಕೆ ಘಟನೋತ್ತರ ಅನುಮೋದನೆ ನೀಡಿದೆ.

15 ಹಾಸ್ಟೆಲ್​ಗಳ ನಿರ್ವಣಕ್ಕೆ ಅಸ್ತು: ರಾಜ್ಯದ 15 ತಾಲೂಕುಗಳಲ್ಲಿ ತಲಾ ಒಂದು ಹಾಸ್ಟೆಲ್ ಕಟ್ಟಡಗಳನ್ನು ಒಟ್ಟು 105 ಕೋಟಿ ರೂ. ಅಂದಾಜು ಮೊತ್ತದಲ್ಲಿ ಲೋಕೋಪಯೋಗಿ ಇಲಾಖೆ ನಿರ್ವಿುಸಲಿದೆ. ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಪ್ರತಿ ಹಾಸ್ಟೆಲ್ ನಿರ್ವಣಕ್ಕೆ 7 ಕೋಟಿ ರೂ. ವೆಚ್ಚಕ್ಕೆ ಆಡಳಿತಾತ್ಮಕ ಅಸ್ತು ಎಂದಿದೆ. ಪ್ರತಿ ಹಾಸ್ಟೆಲ್ ನೂರು ಮಕ್ಕಳ ಪ್ರವೇಶಕ್ಕೆ ಅವಕಾಶ ಕಲ್ಪಿಸಲಿದೆ.

ಬೆಂಗಳೂರು ದಕ್ಷಿಣ, ಬೆಂಗಳೂರು, ಚಿತ್ರದುರ್ಗ, ದಾವಣಗೆರೆ, ತುಮಕೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ಪುತ್ತೂರು, ಉಡುಪಿ, ಬೆಳಗಾವಿ, ವಿಜಯಪುರ, ಸಿಂಧನೂರು, ಬಳ್ಳಾರಿ ಮತ್ತು ಮಾನ್ವಿ ತಾಲೂಕಿನಲ್ಲಿ ಈ ಹಾಸ್ಟೆಲ್​ಗಳು ನಿರ್ವಿುಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.

ಬೃಂದಾವನ ಉದ್ಯಾನವನ ಮೇಲ್ದರ್ಜೆಗೆ: ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ (ಕೆಆರ್​ಎಸ್) ಬೃಂದಾವನ ಉದ್ಯಾನವನ ಮೇಲ್ದರ್ಜೆಗೇರಿಸುವ ಜಲ ಸಂಪನ್ಮೂಲ ಇಲಾಖೆ ಪ್ರಸ್ತಾವನೆಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು.

ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ)ದ ಮಾದರಿಯಲ್ಲಿ ಉನ್ನತೀಕರಿಸಲು 2,663.74 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಕೆಆರ್​ಎಸ್ ವೃತ್ತ ಆಧುನೀಕರಣ, ಜಲಕ್ರೀಡೆ, ಹೋಟೆಲ್​ಗಳ ನಿರ್ವಣ, ಕಾರಂಜಿಗೆ ಡಿಜಿಟಲ್ ಎಫೆಕ್ಟ್, ಕ್ಯಾಸ್ಕೇಡ್, ಹೆಲಿಪ್ಯಾಡ್, ರ್ಪಾಂಗ್ ಸೇರಿ 45 ಚಟುವಟಿಕೆಗಳನ್ನು ಒಳಗೊಂಡ ಡಿಸ್ನಿ ವರ್ಲ್ಡ್ ಮಾದರಿಯಲ್ಲಿ ಆಧುನೀಕರಿಸಿದ ಬೃಂದಾವನ ಮೈದಳೆಯಲಿದೆ. ಆಸಕ್ತ ಸಂಸ್ಥೆಗಳು ತಮ್ಮದೇ ಆದ ಪರಿಕಲ್ಪನೆಯ ವಿನ್ಯಾಸ ರೂಪಿಸಿಕೊಡಲು ಅವಕಾಶವಿದೆ. ಜತೆಗೆ ಸರ್ಕಾರ ಬಯಸಿದ ಎಲ್ಲ ಚಟುವಟಿಕೆಗಳು ವಿನ್ಯಾಸ ಒಳಗೊಂಡಿರಬೇಕಾಗುತ್ತದೆ. ನಂತರ ಸರ್ಕಾರ ಸೂಕ್ತ ಪರಿಕಲ್ಪನೆಯುಳ್ಳ ವಿನ್ಯಾಸಕ್ಕೆ ಒಪ್ಪಿಗೆ ನೀಡಿ, ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಆಸಕ್ತಿ ವ್ಯಕ್ತಗೊಳಿಸುವ ಟೆಂಡರ್ ಆಹ್ವಾನಿಸುತ್ತದೆ ಎಂದು ಎಚ್.ಕೆ.ಪಾಟೀಲ ವಿವರಿಸಿದರು.

  • 34.5 ವರ್ಷ ಗುತ್ತಿಗೆ ಅವಧಿ ?ಪಿಪಿಪಿ ಮಾದರಿ ಅಭಿವೃದ್ಧಿ ? 45 ಘಟಕಗಳ ಪರಿಗಣನೆ ? ಡಿಸ್ನಿವರ್ಲ್ಡ್ ಮಾದರಿ ? ಪ್ರವಾಸೋದ್ಯಮ ಉತ್ತೇಜನ ಗುರಿ ? ಪೂರ್ಣ ಹೂಡಿಕೆ ಖಾಸಗಿಯದ್ದೇ
  • ಧಾರವಾಡದ ಕೆಐಎಡಿಬಿಯ ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿನ 2.64 ಎಕರೆ ಕೃಷಿಯೇತರ ನಿವೇಶನವನ್ನು ಲೋಕ ಶಿಕ್ಷಣ ಟ್ರಸ್ಟ್ ರವರಿಗೆ ಹಂಚಿಕೆ ಮಾಡಿದ್ದು, ನಿವೇಶನದ ಮೊತ್ತಕ್ಕೆ ಶೇ.75 ರಿಯಾಯಿತಿ.
  • ಅನಿಮೇಶನ್ ವಿಶ್ಯುವಲ್ ಎಫೆಕ್ಟ್ ಗೇಮಿಂಗ್ ಮತ್ತು ಕಾಮಿಕ್ಸ್ (ಎವಿಜಿಸಿ) 2.0. - ಉತ್ಕೃಷ್ಟತಾ ಕೇಂದ್ರ ಸ್ಥಾಪಿಸಲು ಅಂದಾಜು ಮೊತ್ತ 16 ಕೋಟಿ ರೂ. (ಕೆಪೆಕ್ಸ್​ಗೆ ಏಳು ಕೋಟಿ ರೂ. ಹಾಗೂ ಅಪೆಕ್ಸ್​ಗೆ ಒಂಭತ್ತು ಕೋಟಿ ರೂ.)ಗಳಿಗೆ ಅನುಮೋದನೆ.
  • ಕೌಶಲ್ಯ ಅಭಿವೃದ್ಧಿ ಇಲಾಖೆ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕಂಪನಿ ಕಾಯ್ದೆಯಡಿ ಸ್ಥಾಪನೆಗೆ ಅನುಮೋದನೆ. ಅಧಿಕಾರಿಗಳ ಜತೆಗೆ ಅಧಿಕಾರೇತರರು ಐವರು ನಿರ್ದೇಶಕರಾಗಿರಲಿದ್ದಾರೆ. ಕೌಶಲ್ಯಕ್ಕೆ ಸಂಬಂಧಿತ ಎಲ್ಲ ಅಲ್ಪಾವಧಿ ಚಟುವಟಿಕೆಗಳ ಜತೆಗೆ ಕೇಂದ್ರ, ರಾಜ್ಯ ಸರ್ಕಾರದ ಮೂರು ಪ್ರಮುಖ ಯೋಜನೆಗಳು ನಿಗಮದ ವ್ಯಾಪ್ತಿಗೆ ಬರಲಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net