ಹಾಸ್ಯನಟ ವಡಿವೇಲು ಬಗ್ಗೆ ಹೀಗೆಲ್ಲಾ ಹೇಳಿದ್ದಾನೆ ಮಗ ಸುಬ್ರಮಣಿ!

vadivelu
Published on

ಚೆನ್ನೈ: ಕಾಲಿವುಡ್ ಸ್ಟಾರ್ ಹಾಸ್ಯನಟ ವಡಿವೇಲು ಕೆಲವು ವಿವಾದಗಳ ನಂತರ ಬ್ಯಾಕ್ ಟು ಬ್ಯಾಕ್ ಚಿತ್ರಗಳೊಂದಿಗೆ ಮರಳಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಮಗನ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಅವರ ಮಗ ಸುಬ್ರಮಣಿ ಮಹತ್ವದ ವಿಷಯಗಳನ್ನು ಹಂಚಿಕೊಂಡಿದ್ದಾರೆ.


ವಡಿವೇಲು ತಮ್ಮ ಸಂದರ್ಶನದಲ್ಲಿ ಎಲ್ಲಿಯೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಪ್ರಸ್ತಾಪಿಸಿಲ್ಲ. ಕುಟುಂಬ ಸದಸ್ಯರ ಪೋಟೋಗಳು ಸಹ ಹೊರ ಬಂದಿರಲಿಲ್ಲ. ಈ ನಡುವೆ ವಡಿವೇಲು ಪುತ್ರ ಸುಬ್ರಮಣಿ ಮದುವೆಯ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಆದರೆ ಆ ಪೋಟೋಗಳನ್ನು ಅಭಿಮಾನಿಗಳು ಬೆಚ್ಚಿಬಿದ್ದಿದ್ದಾರೆ. ಮಗ ಸುಬ್ರಮಣಿ ನಿಜವಾಗಿ ಎಲ್ಲಿ ಇದ್ದಾರೆ? ವಡಿವೇಲು ಮಗನನ್ನು ಸಿನಿಮಾ ರಂಗಕ್ಕೆ ಯಾಕೆ ತರಬಾರದು? ಈ ಸುದ್ದಿಯ ಬಗ್ಗೆ ಮಗ ಸುಬ್ರಮಣಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ವಡಿವೇಲು ಅವರಿಗೆ ಒಬ್ಬ ಪುತ್ರಿ ಹಾಗೂ ಪುತ್ರ ಇದ್ದಾರೆ. ಇಬ್ಬರಿಗೂ ಮದುವೆಯಾಗಿದೆ. ಮಗ ಸುಬ್ರಮಣಿಗೆ 10 ವರ್ಷಗಳ ಹಿಂದೆ ಹತ್ತಿರದ ಸಂಬಂಧಿಯೊಬ್ಬರ ಮಗಳೊಂದಿಗೆ ವಿವಾಹವಾಗಿತ್ತು.

ಯೂಟ್ಯೂಬ್ ಚಾನೆಲ್‌ ಜೊತೆ ಮಾತನಾಡಿ, ನನ್ನ ತಂದೆಯನ್ನು ತುಂಬಾ ಪ್ರೀತಿಸುತ್ತೇನೆ. ನನ್ನ ಮಕ್ಕಳಿಗೆ ನನ್ನ ತಂದೆಯ ಹೆಸರನ್ನೇ ಇಟ್ಟಿದ್ದೇನೆ. ತಂದೆ ಯಾವುದೇ ಅಗತ್ಯಕ್ಕೆ ಸಹಾಯ ಮಾಡುತ್ತಾರೆ. ಆದರೆ ಅವರ ಮೇಲೆ ಅವಲಂಬಿತರಾಗದೆ ವ್ಯವಸಾಯ ಮಾಡುತ್ತಿದ್ದು, ಊರಿಗೆ ಬರುವಂತೆ ಹೇಳಿದರೂ ಊರಿಗೆ ಹೋಗುತ್ತಿರಲಿಲ್ಲ ಎಂದು ಸುಬ್ರಮಣಿ ಹೇಳಿದರು.

ತಂದೆ ವಡಿವೇಲು ಪಿತ್ರಾರ್ಜಿತವಾಗಿ ಬಂದ ಜಮೀನಿನಲ್ಲಿ ಸುಬ್ರಮಣಿ ಕೃಷಿ ಮಾಡುತ್ತಿದ್ದಾರೆ. ಇದೀಗ ಸುಬ್ರಮಣಿ ಅವರ ಸಂದರ್ಶನ ವೈರಲ್ ಆಗುತ್ತಿದೆ. ವಡಿವೇಲು ನಿಮ್ಮ ಮಗನನ್ನು ಉತ್ತಮ ವ್ಯಕ್ತಿತ್ವದ ಮನುಷ್ಯನನ್ನಾಗಿ ಮಾಡಿದ್ದಾನೆ ಎಂದು ನೆಟಿಜನ್‌ಗಳು ಕೊಂಡಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net