

ಉತ್ತರ ಕನ್ನಡ: ಕುಡಿತದ ಚಟಕ್ಕೆ ಒಳಗಾಗಿದ್ದ ಮಗ ತಾಯಿಯನ್ನು ಅಮಾನುಷವಾಗಿ ಹತ್ಯೆ ಮಾಡಿದ ಘಟನೆ ಕುಮಟಾ ತಾಲೂಕಿನ ಮೇಲಿನಕೂಜಳ್ಳಿಯಲ್ಲಿ ನಡೆದಿದೆ. ಸದ್ಯ ಆರೋಪಿ ಮಧುಕರ್ ಭಟ್ನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಮಧುಕರ್ ಭಟ್ ಕುಡಿತದ ಚಟ ಬೆಳೆಸಿಕೊಂಡಿದ್ದ. ಹೀಗಾಗಿ ದಿನನಿತ್ಯ ಮನೆಯಲ್ಲಿ ತನ್ನ ಕುಡಿತಕ್ಕೆ ಹಣ ನೀಡುವಂತೆ ತಾಯಿಗೆ ಕಿರುಕುಳ ನೀಡುತ್ತಿದ್ದ. ಹೀಗಾಗಿ ಇವರ ಮನೆಯಲ್ಲಿ ಮಗನ ಕುಡಿತದ ಕಾರಣದಿಂದ ದಿನವೂ ತಾಯಿ ಮಗನ ನಡುವೆ ಕಲಹ ಏರ್ಪಡುತ್ತಿತ್ತು. ಎದಿನಂತೆ ಇಂದೂ ಕೂಡಾ ತಾಯಿಯೊಂದಿಗೆ ಹಣ ನೀಡುವಂತೆ ಜಗಳವಾಡಿದ್ದಾನೆ. ಆದರೆ ಇಂದು(ಡಿ.07) ಹಣ ನೀಡದ ಕಾರಣ ತಾಯಿ ಗೀತಾ ಭಟ್ (60) ಮಗನಿಂದಲೇ ಕೊಲೆಯಾಗಿ ಹೋಗಿದ್ದಾರೆ.
ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಕುಮಟಾ ಪಿಎಸ್ಐ ನವೀನಕುಮಾರ ಹಾಗೂ ಸಿಬ್ಬಂದಿಗಳು ಭೇಟಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.