‘ಲೀಲಾ ಮೋಹನ ಪ್ರೇಮಕಥೆ’ ಚಲನಚಿತ್ರದ ಚಿತ್ರೀಕರಣ ಆರಂಭ

film shooting
ಸಾಂದರ್ಭಿಕ ಚಿತ್ರ
Published on

ಮೈಸೂರು: ಸಿದ್ಧಲಿಂಗೇಶ್ವರ ಪ್ರೊಡಕ್ಷನ್ ಅಡಿಯಲ್ಲಿ ‘ಲೀಲಾ ಮೋಹನ ಪ್ರೇಮಕಥೆ’ ಚಲನಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ಮೂರು ತಿಂಗಳಲ್ಲಿ ಪೂರ್ಣಗೊಂಡು ತೆರೆ ಕಾಣಲಿದೆ ಎಂದು ನಿರ್ಮಾಪಕ ದಾಸ್ ಮೋಹನ್ ತಿಳಿಸಿದರು.
ಇದೊಂದು ಸತ್ಯಕಥೆ ಆಧಾರಿತ ಚಲನಚಿತ್ರವಾಗಿದೆ. ಇದರಲ್ಲಿ ದ್ವಂದ್ವಾರ್ಥದ ಸಂಭಾಷಣೆಗಳಿಲ್ಲ. ಐದು ಹಾಡು, ನಾಲ್ಕು ಹೊಡೆದಾಟದ ದೃಶ್ಯಗಳಿವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಚಿತ್ರದ ನಟ-ನಟಿಯರಾದ ಪ್ರತೀಕ್, ಜೀವಿತಾ, ಅಮಿತಾ, ಅಭಿಷೇಕ್, ಕಾಮರಾಜ್, ಸಾರಿಕಾ, ಭೂಮಿಕಾ, ರಾಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net