ಅಫ್ಘಾನಿಸ್ತಾನದ ಕುನಾರ್​ ಪ್ರಾಂತ್ಯದಿಂದ ಮಾರ್ಟರ್​ ಶೆಲ್​ ದಾಳಿ; ಪಾಕಿಸ್ತಾನದ ಒಂದೇ ಕುಟುಂಬದ ಏಳು ಮಂದಿ ಸಾವು

Marter Shell 2 Feb 20
Published on

ಪೇಶಾವರ: ಪಾಕಿಸ್ತಾನದ ವಾಯುವ್ಯದಲ್ಲಿರುವ ಖೈಬರ್​ ಫಕ್ತುಂಕ್ವಾ ಪ್ರದೇಶದಲ್ಲಿ ಅಫ್ಘಾನಿಸ್ತಾನದಿಂದ ಮಾರ್ಟರ್​ ಶೆಲ್​ ದಾಳಿ ನಡೆದಿದ್ದು ಒಂದೇ ಕುಟುಂಬದ ಏಳು ಮಂದಿ ಮೃತಪಟ್ಟಿದ್ದಾರೆ.

ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಗಡಿ ಪ್ರದೇಶದಲ್ಲಿರುವ ಬಾತ್ವಾರ್​ ಬಾಂಗ್ರೋ ಎಂಬ ಹಳ್ಳಿಯ ಮನೆಯೊಂದಕ್ಕೆ ಮಾರ್ಟರ್​ ಶೆಲ್​ ಹೊಡೆದ ಪರಿಣಾಮ ಆ ಮನೆಯಲ್ಲಿದ್ದ ನಾಲ್ವರು ಮಕ್ಕಳು, ಇಬ್ಬರು ಮಹಿಳೆಯರು ಸೇರಿ ಒಟ್ಟು ಏಳು ಮಂದಿ ಮೃತಪಟ್ಟಿದ್ದಾರೆ.

ಮನೆ ಸಂಪೂರ್ಣ ನಾಶವಾಗಿದೆ. ಸ್ಥಳೀಯರು, ಜಿಲ್ಲಾಡಳಿತದ ಅಧಿಕಾರಿಗಳು, ರಕ್ಷಣಾ ಪಡೆಗಳು, ಆ್ಯಂಬುಲೆನ್ಸ್​ ಸ್ಥಳಕ್ಕೆ ತೆರಳಿದ್ದಾರೆ.

ಅಫ್ಘಾನಿಸ್ತಾನದ ಕುನಾರ್​ ಪ್ರಾಂತ್ಯದಿಂದ ಮಾರ್ಟರ್​ ಶೆಲ್​ ದಾಳಿ ನಡೆದಿದೆ ಎಂದು ಪಾಕ್​ನ ಅಧಿಕಾರಿಗಳು ತಿಳಿಸಿದ್ದಾರೆ.(ಪಿಟಿಐ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net