ಪೌರಕಾರ್ಮಿಕರ ಸೇವೆ ಶ್ಲಾಘನೀಯ

klr hunimme
ಕೋಲಾರದ ಬಾಬಾ ವಿದ್ಯಾಸಂಸ್ಥೆಯಲ್ಲಿ ಸ್ವರ್ಣಭೂಮಿ ೌಂಡೇಶನ್​ ಹಾಗೂ ಜಿಲ್ಲಾ ಸಾಹಿತ್ಯ ಸಾಂಸತಿಕ ಬಳಗದ ವತಿಯಿಂದ ತಿಂಗಳ ಸಾಹಿತ್ಯ ಹುಣ್ಣಿಮೆ ಪ್ರಯುಕ್ತ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಸಂಗೀತ ದಿನ ಹಾಗೂ ಪೌರಕಾರ್ಮಿಕರ ಸನ್ಮಾನ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ವಯಸ್ಕರ ಶಿಕ್ಷಣಾಧಿಕಾರಿ ಸಿ.ಆರ್​.ಅಶೋಕ್​ ಉದ್ಘಾಟಿಸಿದರು. ಶಿವಕುಮಾರ್​, ಎಂ.ಆರ್​.ವೇಣುಸುಂದರಗೌಡ, ಆನಂದ ರೆಡ್ಡಿ ಇದ್ದರು.
Published on

ಕೋಲಾರ: ನಗರದ ಸ್ವಚ್ಛತೆ ಕಾಪಾಡುವ ಪೌರಕಾರ್ಮಿಕರ ಸೇವೆಯನ್ನು ಪ್ರತಿಯೊಬ್ಬರು ಸ್ಮರಿಸಬೇಕು, ಅವರು ಪಟ್ಟಣ, ನಗರದ ಜೀವನಾಡಿಗಳಾಗಿದ್ದು, ಸಾರ್ವಜನಿಕರು ಆರೋಗ್ಯವಂತರಾಗಿ ಜೀವನ ನಡೆಸಲು ಸಾಧ್ಯವಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ವಯಸ್ಕರ ಶಿಕ್ಷಣಾಧಿಕಾರಿ ಸಿ.ಆರ್​.ಅಶೋಕ್​ ಅಭಿಪ್ರಾಯಪಟ್ಟರು.

ನಗರದ ಬಾಬಾ ವಿದ್ಯಾಸಂಸ್ಥೆಯಲ್ಲಿ ಸ್ವರ್ಣಭೂಮಿ ಫೌಂಡೇಶನ್​ ಹಾಗೂ ಜಿಲ್ಲಾ ಸಾಹಿತ್ಯ ಸಾಂಸತಿಕ ಬಳಗದದಿಂದ ತಿಂಗಳ ಸಾಹಿತ್ಯ ಹುಣ್ಣಿಮೆ ಪ್ರಯುಕ್ತ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಸಂಗೀತ ದಿನ ಹಾಗೂ ಪೌರಕಾರ್ಮಿಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸೇವಾನಿರತ ಪೌರಕಾರ್ಮಿಕರು ತಮ್ಮ ಆರೋಗ್ಯ ಲೆಕ್ಕಿಸದೆ ಪಟ್ಟಣಗಳಲ್ಲಿ ರೋಗರುಜಿನಗಳನ್ನು ಹರಡುದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ, ಅವರ ಸೇವೆಗೆ ಬೆಲೆ ಕಟ್ಟಲಾಗದು ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಗೌರವಾಧ್ಯಕ್ಷ ಟಿ.ಸುಬ್ಬರಾಮಯ್ಯ ಮಾತನಾಡಿ, ಪೌರಕಾರ್ಮಿಕರನ್ನು ನಾವು ಆರೋಗ್ಯ ಚಿಕಿತ್ಸಕರು ಎಂದು ಬಣ್ಣಿಸಬೇಕು. ನಮ್ಮ ಮನೆ, ನಗರ ಸ್ವಚ್ಛವಾಗಿ ಇರಬೇಕಾದರೆ ಪೌರಕಾರ್ಮಿಕರ ಪಾತ್ರ ಬಹಳ ದೊಡ್ಡದು ಎಂದು ಬಣ್ಣಿಸಿದರು.
ಪ್ರಾಣಿ ಪಕ್ಷಿ ಮನುಷ್ಯರ ತ್ಯಾಜ್ಯಗಳ ನಿರ್ವಹಣೆಯಲ್ಲಿ ಕೆಲಸ ಮಾಡುತ್ತಿರುವುದರಿಂದ ಪ್ರತಿಯೊಬ್ಬ ಕಾರ್ಮಿಕರು ತಮ್ಮದೇ ಆದ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಸಮಾಜ ಅವರನ್ನು ಕೀಳಾಗಿ ನೋಡದೆ ಗೌರವಯುತವಾಗಿ ನೋಡಿಕೊಳ್ಳಬೇಕು. ಅವರಿಗೆ ಆರೋಗ್ಯಕರ ಬೆಳವಣಿಗೆಗೆ ಬೇಕಾದ ಸಲಕರಣೆಗಳನ್ನು ಸರ್ಕಾರ ನೀಡಬೇಕು ಎಂದರು.
ದಾಸ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಪೋಸ್ಟ್​ ನಾರಾಯಣಸ್ವಾಮಿ ಮಾತನಾಡಿ, ಪೌರಕಾರ್ಮಿಕರು ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವುದರಿಂದ ಅವರ ಕುಟುಂಬಗಳು ತುಂಬಾ ಸಂಕಷ್ಟದಲ್ಲಿರುತ್ತದೆ. ಅವರಿಗೆ ನೀಡುವ ಸಂಬಳವೂ ಸಹ ಕುಟುಂಬವನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ ಅವರಿಗೂ ಎಲ್ಲರಂತೆ ಬದುಕಲು ಒಳ್ಳೆಯ ಅವಕಾಶಗಳನ್ನು ಒದಗಿಸಬೇಕೆಂದು ತಿಳಿಸಿದರು.
ಗಾಯಕ ವೈ.ಹರ್ಷಿತ್​, ಪೌರಕಾರ್ಮಿಕರಾದ ಶ್ರೀನಿವಾಸ್​, ಲಕ್ಷ್ಮಮ್ಮ ಮತ್ತು ವೆಂಕಟಾಚಲಪತಿ ಅವರನ್ನು ಸನ್ಮಾನಿಸಲಾಯಿತು. ಈ ನೆಲ ಈ ಜಲ ವೆಂಕಟಾಚಲಪತಿ ಜಾನಪದ ಹಾಡು ನಡೆಸಿಕೊಟ್ಟರು.
ಬಾಬಾ ವಿದ್ಯಾ ಸಂಸ್ಥೆಯ ಆಡಳಿತ ಅಧಿಕಾರಿ ಎಂ.ಆರ್​.ವೇಣುಸುಂದರಗೌಡ, ಸ್ವರ್ಣಭೂಮಿ ಫೌಂಡೇಶನ್​ ಸಂಸ್ಥಾಪಕ ಬಿ.ಶಿವಕುಮಾರ್​, ಅರಳು ಸಾಹಿತ್ಯ ಪ್ರಶಸ್ತಿ ಪುರಸತ ವಿ.ಲಕ್ಷ್ಮಯ್ಯ, ಕೆ.ಎನ್​.ರವೀಂದ್ರನಾಥ್​, ಪರ್ವತ್​ ಸ್ಟೋರ್ಸ್​ ಮಾಲೀಕ ಆನಂದ್​ರೆಡ್ಡಿ, ವಕೀಲ ವೀಣಾ ರವಿಕುಮಾರ್​, ಸುಪ್ರೀಂ ಸೇವಾ ಸಂಸ್ಥೆಯ ಸುಪ್ರೀಂ, ಶ್ರೀಧರ್​ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net