ಊದುಗುಡ್ಡೆ ದೈವಸ್ಥಾನದಲ್ಲಿ ಸಂಕೋಚ ಕಾರ್ಯ

ಊದುಗುಡ್ಡೆ ದೈವಸ್ಥಾನ ಜೀರ್ಣೋದ್ಧಾರದ ಪ್ರಯುಕ್ತ ಸಂಕೋಚ ಕಾರ್ಯ ವಿನಯ ಕಾರಂತರ ನೇತೃತ್ವದಲ್ಲಿ ನಡೆಯಿತು. ಕಿಲೆಂಜಾರು ಅರಮನೆ ಮುಖ್ಯಸ್ಥ ದಿನೇಶ್ ಕುಮಾರ್ ಬಲ್ಲಾಳ್, ಚಂದ್ರಹಾಸ ಶೆಟ್ಟಿ ಉಳಿಪಾಡಿಗುತ್ತು ಮೊದಲಾದವರಿದ್ದರು.
ಊದುಗುಡ್ಡೆ ದೈವಸ್ಥಾನ ಜೀರ್ಣೋದ್ಧಾರದ ಪ್ರಯುಕ್ತ ಸಂಕೋಚ ಕಾರ್ಯ ವಿನಯ ಕಾರಂತರ ನೇತೃತ್ವದಲ್ಲಿ ನಡೆಯಿತು. ಕಿಲೆಂಜಾರು ಅರಮನೆ ಮುಖ್ಯಸ್ಥ ದಿನೇಶ್ ಕುಮಾರ್ ಬಲ್ಲಾಳ್, ಚಂದ್ರಹಾಸ ಶೆಟ್ಟಿ ಉಳಿಪಾಡಿಗುತ್ತು ಮೊದಲಾದವರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜೀರ್ಣೋದ್ಧಾರ ಪ್ರಯುಕ್ತ ದೈವಜ್ಞರ ಸಲಹೆಯಂತೆ ಕಾರ್ಯ
  • ಕಿಲೆಂಜಾರು ಅರಮನೆಯಲ್ಲಿ ನವಕ ಕಲಶಾಭಿಷೇಕ, ಪರ್ವ ಸೇವೆ,
  • ಕೊಡಮಣಿತ್ತಾಯ ದೈವದ ದರ್ಶನ
  • ಕಿಲೆಂಜಾರು ಅರಮನೆಯಲ್ಲಿ ದೈವಗಳ ಬಾಲಾಲಯ ಪ್ರತಿಷ್ಠಾಪನೆ
ಗುರುಪುರ: ಕುಪ್ಪೆಪದವು ಕಿಲೆಂಜಾರು ಗ್ರಾಮದ ಶ್ರೀ ಕೊಡಮಣಿತ್ತಾಯ ದೈವದ ಊದುಗುಡ್ಡೆ ದೈವಸ್ಥಾನ ಜೀರ್ಣೋದ್ಧಾರ ಪ್ರಯುಕ್ತ ದೈವಜ್ಞರ ಸಲಹೆಯಂತೆ ದೈವಸ್ಥಾನದ ಸಂಕೋಚ ಕಾರ್ಯ ವಿನಯ ಕಾರಂತರ ನೇತೃತ್ವದಲ್ಲಿ ಗುರುವಾರ ನೆರವೇರಿತು.
ಬೆಳಗ್ಗೆ 9ಕ್ಕೆ ಕಿಲೆಂಜಾರು ಅರಮನೆಯಲ್ಲಿ ನವಕ ಕಲಶಾಭಿಷೇಕ, ಪರ್ವ ಸೇವೆ, 10.30ಕ್ಕೆ ಊದುಗುಡ್ಡೆ ದೈವಸ್ಥಾನದಲ್ಲಿ ಕೊಡಮಣಿತ್ತಾಯ ಹಾಗೂ ಪರಿವಾರ ದೈವಗಳಿಗೆ ನವಕ ಕಲಶಾಭಿಷೇಕ, ಪರ್ವ ಸೇವೆ ನಡೆದ ಬಳಿಕ ಕೊಡಮಣಿತ್ತಾಯ ದೈವದ ದರ್ಶನದೊಂದಿಗೆ ಕಿಲೆಂಜಾರು ಅರಮನೆಯಲ್ಲಿ ದೈವಗಳ ಬಾಲಾಲಯ ಪ್ರತಿಷ್ಠಾಪನೆ, ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿತು.
ಪೂಜಾ ಕಾರ್ಯಕ್ರಮದಲ್ಲಿ ಕಿಲೆಂಜಾರು ಅರಮನೆ ಮುಖ್ಯಸ್ಥ ದಿನೇಶ್ ಕುಮಾರ್ ಬಲ್ಲಾಳ್, ಚಂದ್ರಹಾಸ ಶೆಟ್ಟಿ ಉಳಿಪಾಡಿಗುತ್ತು, ಮನೋಹರ ಶೆಟ್ಟಿ ನಡಿಕಂಬ್ಳಗುತ್ತು, ರೋಹಿತ್ ಶೆಟ್ಟಿ ಮಜಲ್ ಕೋಡಿಗುತ್ತು, ಅನಿಲ್ ಕುಮಾರ್ ಅಂಬೆಲೊಟ್ಟು, ಜಿತೇಂದ್ರ ರನ್ನಜೆ, ಹರೀಶ್ ಪೂಜಾರಿ ಊದು, ಸಂತೋಷ್ ಕಡಂಬಿಲ, ಸನತ್ ರನ್ನಜೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಗದೀಶ ಕುಲಾಲ್ ಪಾಕಜೆ, ಕಾರ್ಯದರ್ಶಿ ಚೇತನ್ ಸುವರ್ಣ ಅಂಬೆಲೊಟ್ಟು, ಕೋಶಾಧಿಕಾರಿ ಗಣೇಶ್ ನಾಯ್ಕ ಮಾಣಿಪಲ್ಲ, ಸಮಿತಿ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net