ಷೇರುದಾರರ ಪಾತ್ರ ಪ್ರಮುಖ

ಷೇರುದಾರರ ಪಾತ್ರ ಪ್ರಮುಖ
Published on

ಪಿರಿಯಾಪಟ್ಟಣ: ಸಹಕಾರ ಸಂಘದ ಅಭಿವೃದ್ಧಿಯಲ್ಲಿ ಷೇರುದಾರ ಸದಸ್ಯರ ಪಾತ್ರ ಪ್ರಮುಖವಾಗಿದೆ ಎಂದು ತಾಲೂಕು ನೆಲ- ಜಲ ಗ್ರಾಮೀಣ ಅಭಿವೃದ್ಧಿ ಸಹಕಾರ ಸಂಘದ ಅಧ್ಯಕ್ಷ ಎಚ್.ಜಿ.ಶಿವಶಂಕರ್ ತಿಳಿಸಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಇತ್ತೀಚಿಗೆ ಆಯೋಜಿಸಿದ್ದ ಸಂಘದ 2023 - 24ನೇ ಸಾಲಿನ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ಮುಂಬರುವ ದಿನಗಳಲ್ಲಿ ಸಂಘಕ್ಕೆ ಹೊಸದಾಗಿ ಷೇರುದಾರ ಸದಸ್ಯರನ್ನು ಸೇರಿಸಿಕೊಂಡು ಪಿಗ್ಮಿ ಸಂಗ್ರಹ ಮಾಡುವ ಆಲೋಚನೆಯಿದೆ. ಮೈರಾಡ ಕಾವೇರಿ ಪ್ರಾದೇಶಿಕ ಸಂಸ್ಥೆ ಸಹಯೋಗದೊಂದಿಗೆ ರೈತರ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ತಾಲೂಕಿನಲ್ಲಿ ಜಾರಿಗೊಳಿಸಲಾಗಿದೆ ಎಂದರು.
ಮೈಕ್ಯಾಪ್ಸ್ ಸಂಸ್ಥೆ ಕಾರ್ಯಕ್ರಮ ಸಮನ್ವಯಾಧಿಕಾರಿ ರಾಜಪ್ಪ ಮಾತನಾಡಿ, ಐಟಿಸಿ ಸಂಸ್ಥೆ ಆರ್ಥಿಕ ಸಹಯೋಗದೊಂದಿಗೆ ತಾಲೂಕಿನಲ್ಲಿ ಬಂಗಾರದ ಭವಿಷ್ಯದೆಡೆಗೆ ಯೋಜನೆಯಲ್ಲಿ 150ಕ್ಕೂ ಹೆಚ್ಚು ಕೆರೆಗಳ ಹೂಳೆತ್ತಿಸಲಾಗಿದೆ. ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿ ನಿರ್ಮಾಣ ಸೇರಿದಂತೆ ಅರಣ್ಯ ಇಲಾಖೆಯ ಸಹಕಾರದಿಂದ ಹಲವು ಜಾತಿಯ ಗಿಡಗಳನ್ನು ರೈತರಿಗೆ ಉಚಿತವಾಗಿ ನೀಡಿ ನೆಲ, ಜಲ ಸಂರಕ್ಷಣೆಗೆ ಒತ್ತು ನೀಡಲಾಗುತ್ತಿದ್ದು, ರೈತರು ಸಂಸ್ಥೆ ವತಿಯಿಂದ ದೊರೆಯುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.

ಮೈಕ್ಯಾಪ್ಸ್ ಸಂಸ್ಥೆ ಅಧಿಕಾರಿ ವೀಣಾ ಮಾತನಾಡಿ, ನೆಲ- ಜಲ ಸಂರಕ್ಷಣೆ ಮತ್ತು ಹವಾಮಾನ ವೈಪರೀತ್ಯದ ಬಗ್ಗೆ ಮಾಹಿತಿ ನೀಡಿದರು.

ಸಂಘದ ಉಪಾಧ್ಯಕ್ಷ ಕೆ.ಎಸ್.ಲೋಕಪಾಲಯ್ಯ, ನಿರ್ದೇಶಕರಾದ ಶಿವಸ್ವಾಮಿ, ಕೆ.ಬಿ.ಶಿವಕುಮಾರಸ್ವಾಮಿ, ಎಂ.ಎಲ್.ನವೀನ, ಕೆ.ಕೃಷ್ಣೇಗೌಡ, ಎ.ಕುಮಾರ, ಡಿ.ಟಿ.ಸತೀಶ, ಎಚ್.ಎ.ವೆಂಕಟೇಶ್, ಕೆ.ವಿ.ಆನಂದ್, ಎಸ್.ಕೆ.ಜ್ಯೋತಿ, ಇಂದ್ರ, ವೆಂಕಟೇಶ್, ಎ.ಟಿ. ಮಂಜುನಾಯಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಹರೀಶ, ಮೈಕ್ಯಾಪ್ಸ್ ಸಂಸ್ಥೆ ವಿಸ್ತರಣಾಧಿಕಾರಿಗಳಾದ ಕೃಷ್ಣಾಚಾರಿ, ಚಂದ್ರಪ್ಪ, ಕಾರ್ತಿಕ್, ಸಂಜಯ್, ಸತೀಶ್ ಆರಾಧ್ಯ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net