The Rock: ಡಬ್ಲ್ಯೂಡಬ್ಲ್ಯೂಇ ಅಭಿಮಾನಿಗಳಿಗೆ ಭರ್ಜರಿ ಸುದ್ದಿಯೊಂದು ಕೇಳಿಬರುತ್ತಿದೆ. ಹಾಲಿವುಡ್ ಸ್ಟಾರ್ ಹಾಗೂ ಡಬ್ಲ್ಯೂಡಬ್ಲ್ಯೂಇ ದಿಗ್ಗಜ 'ದಿ ರಾಕ್' (The Rock) ಮುಂಬರುವ 'ಸರ್ವೈವರ್ ಸೀರೀಸ್ 2026' ಕಾರ್ಯಕ್ರಮದಲ್ಲಿ ಮತ್ತೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ಡಬ್ಲ್ಯೂಡಬ್ಲ್ಯೂಇ ದಿಗ್ಗಜ, 'ದಿ ಗ್ರೇಟ್ ಒನ್' ಖ್ಯಾತಿಯ ಹಾಲಿವುಡ್ ಸ್ಟಾರ್ ದಿ ರಾಕ್ ಈ ಮೆಗಾ ವೇದಿಕೆಗೆ ಕಮ್‌ಬ್ಯಾಕ್ ಮಾಡಲು ಇರುವ 3 ಮುಖ್ಯ ಕಾರಣಗಳು ಇಲ್ಲಿವೆ.
996ರ ನವೆಂಬರ್ 17ರಂದು 'ಸರ್ವೈವರ್ ಸೀರೀಸ್' ವೇದಿಕೆಯಲ್ಲಿ ರಾಕಿ ಮೈವಿಯಾ ಹೆಸರಿನಲ್ಲಿ ಡಬ್ಲ್ಯೂಡಬ್ಲ್ಯೂಇಗೆ ಪದಾರ್ಪಣೆ ಮಾಡಿದ್ದ ದಿ ರಾಕ್, ಗೋಲ್ಡ್‌ಡಸ್ಟ್ ಅವರನ್ನು ಸೋಲಿಸಿ ಗಮನ ಸೆಳೆದಿದ್ದರು. ಇದೀಗ ತಮ್ಮ ವೃತ್ತಿಜೀವನದ 30ನೇ ವರ್ಷದ ಸಂಭ್ರಮಕ್ಕೆ ಅದೇ ವೇದಿಕೆಗೆ ಮರಳುವ ಸಾಧ್ಯತೆಯಿದೆ.
ದಿ ರಾಕ್ ಅವರ ಡೇಟ್ಸ್ ಸಿಗುವುದು ಯಾವಾಗಲೂ ಕಷ್ಟವೇ. ಆದರೆ, ತಮ್ಮ ಮನಸ್ಸಿನಲ್ಲಿರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಅವರು ಹೇಗಾದರೂ ದಾರಿ ಹುಡುಕಿಕೊಳ್ಳುತ್ತಾರೆ. ಕಳೆದ ಎರಡು ವರ್ಷಗಳಿಂದ ಅಭಿಮಾನಿಗಳು ಕಾಯುತ್ತಿರುವ ರೋಮನ್ ರೇನ್ಸ್ (Roman Reigns) ವಿರುದ್ಧದ 'ಪಾಸಿಂಗ್-ಆಫ್-ದಿ-ಟಾರ್ಚ್' (ಹೊಣೆಗಾರಿಕೆ ಹಸ್ತಾಂತರಿಸುವ) ಪಂದ್ಯಕ್ಕೆ ಈ ಬಾರಿಯ ಸರ್ವೈವರ್ ಸೀರೀಸ್‌ನಲ್ಲಿ ಮುನ್ನುಡಿ ಬರೆಯುವ ಸಾಧ್ಯತೆಯಿದೆ.
ರೆಸಲ್‌ಮೇನಿಯಾ 43ರಲ್ಲಿ ರೋಮನ್ ರೇನ್ಸ್ ಅವರು ಒಬಾ ಫೆಮಿ (Oba Femi) ವಿರುದ್ಧ ಸೆಣಸಲಿದ್ದಾರೆ ಎಂಬ ವರದಿಗಳಿದ್ದರೂ, ಡಬ್ಲ್ಯೂಡಬ್ಲ್ಯೂಇ ಕೊನೆಯ ಕ್ಷಣದಲ್ಲಿ ಕಥೆಯನ್ನು ಬದಲಿಸಿ 'ದಿ ರಾಕ್ vs ರೋಮನ್ ರೇನ್ಸ್' ಪಂದ್ಯವನ್ನು ಆಯೋಜಿಸುವ ನಿರೀಕ್ಷೆ ಅಭಿಮಾನಿಗಳಲ್ಲಿದೆ.
ಕಳೆದ ಕೆಲವು ವಾರಗಳಿಂದ 'ದಿ ಬ್ಲಡ್‌ಲೈನ್' (The Bloodline) ಮತ್ತು '946' ತಂಡಗಳ ನಡುವೆ ತೀವ್ರ ಸಂಘರ್ಷ ನಡೆಯುತ್ತಿದ್ದು, ವಾರ್‌ಗೇಮ್ಸ್ (WarGames) ಪಂದ್ಯದಲ್ಲಿ ಇವರು ಮುಖಾಮುಖಿಯಾಗಲು ಸಜ್ಜಾಗಿದ್ದಾರೆ. ದಿ ರಾಕ್ ತಮ್ಮ ಕುಟುಂಬವಾದ ಬ್ಲಡ್‌ಲೈನ್ ಸಹಾಯಕ್ಕೆ ಬರುತ್ತಾರೆ ಎಂದು ಅನೇಕರು ಭಾವಿಸಿದ್ದಾರೆ. ಆದರೆ, WWE ಇಲ್ಲಿ ದೊಡ್ಡ ಟ್ವಿಸ್ಟ್ ನೀಡುವ ಸಾಧ್ಯತೆಯಿದೆ.
ಇದನ್ನೂ ಓದಿ: ಒಡೆದ ಕನ್ನಡಿ ಅಶುಭ ಅನ್ನೋದು ಬರೀ ಮೂಢನಂಬಿಕೆಯಾ? ಇದರ ಹಿಂದಿನ ಅಸಲಿ ಕಾರಣ ಇಲ್ಲಿದೆ! | Broken mirror
ಬ್ಲಡ್‌ಲೈನ್ ತಂಡದ ಹಾದಿ ತಪ್ಪುತ್ತಿರುವುದರಿಂದ ಅಸಮಾಧಾನಗೊಂಡಿರುವ ದಿ ರಾಕ್, ಎದುರಾಳಿ '946' ತಂಡದ ನಾಯಕನಾಗಿ ಕಣಕ್ಕಿಳಿದು ಸ್ವಂತ ಕುಟುಂಬದ ಸೋಲಿಗೆ ಕಾರಣವಾಗಬಹುದು. ಇದರೊಂದಿಗೆ ನಿಜವಾದ 'ಟ್ರೈಬಲ್ ಚೀಫ್' ಯಾರು ಎಂಬುದನ್ನು ನಿರ್ಧರಿಸಲು ರೋಮನ್ ರೇನ್ಸ್ ಮತ್ತು ದಿ ರಾಕ್ ನಡುವೆ ಮಹಾ ಕದನ ನಡೆಯುವ ಸಾಧ್ಯತೆಯಿದೆ.