ರಾಷ್ಟ್ರಪತಿಯವರ ಕೈಗೆ ರಿಮೋಟ್ ನೀಡಲಿದೆ ರೋಬಾಟ್.!

1356044
Published on

ಧಾರವಾಡ: ಯಾವುದೇ ಕಾರ್ಯಕ್ರಮಕ್ಕೆ ಗಣ್ಯರು ಬರುತ್ತಾರೆ ಎಂದಾಗ ವಿಶೇಷವಾಗಿ ಸ್ವಾಗತಿಸಲು ತಯಾರಿ ನಡೆಸಲಾಗುತ್ತದೆ. ಅದರಲ್ಲೂ ನಮ್ಮ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ಬರುತ್ತಿದ್ದಾರೆ ಎಂದಾಗ ವಿಭಿನ್ನವಾಗಿ ಸ್ವಾಗತಿಸಲು ಮುಂದಾಗುತ್ತೇವೆ. ಇದೀಗ ಸೆ. 26 ರಂದು ಧಾರವಾಡದ ಇಂಡಿಯನ್​​ ಇನ್ಸ್​​ಟಿಟ್ಯೂಟ್ ಆಫ್​​ ಇನ್​​​ಫಾರ್ಮೇಷನ್​​​ ಟೆಕ್ನಾಲಜಿಯನ್ನು ಉದ್ಘಾಟಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಿಮಿಸುತ್ತಿದ್ದಾರೆ. ಈ ವೇಳೆ ಇವರನ್ನು ಸ್ವಾಗತಿಸಲು ರೋಬಾಟ್​ ಸಿದ್ಧವಾಗಿದೆ.

ಧಾರವಾಡ ಹೊರವಲಯದಲ್ಲಿರುವ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಲ್ಲಿ ರೋಬಾಟ್ ಒಂದನ್ನು ಆವಿಷ್ಕರಿಸಿದ್ದಾರೆ. ಕ್ಯಾಂಪಸ್‌ಗೆ ಬರುವ ಗಣ್ಯರನ್ನು ಸ್ವಾಗತ ಮಾಡುವ ಜವಾಬ್ದಾರಿ ಈ ರೋಬಾಟ್​​ನದ್ದು. ಇದೀಗ ರಾಷ್ಟ್ರಪತಿಯವರನ್ನು ಸ್ವಾಗತಿಸುವ ಈ ರೋಬಾಟ್ ಮುಂದಾಗಿದೆ.

ಉದ್ಘಾಟನೆಯ ರಿಮೋಟನ್ನು ರೋಬಾಟ್​ ಬಂದು ರಾಷ್ಟ್ರಪತಿಯವರ ಕೈಗಿರಿಸಲು ಪ್ಲ್ಯಾನ್ ಮಾಡಲಾಗಿದೆ. ತಜ್ಞರು ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಬೇಕಾದ ಎಲ್ಲಾ ಅವಶ್ಯಕ ಡೇಟಾಗಳನ್ನು ಅಪ್ಲೋಡ್​​ ಮಾಡಿ ರೋಬಾಟ್​ಗೆ ಪ್ರಾಕ್ಟೀಸ್ ಮಾಡಿಸುತ್ತಿದ್ದಾರೆ.

ಪ್ರಶ್ನೆಗಳನ್ನು ಕೇಳಿದಾಗ ಉತ್ತರಿಸುವಂತೆ ತಜ್ಞರು ರೋಬಾಟನ್ನು ಸಿದ್ಧಪಡಿಸಿದ್ದಾರೆ. ಇಲ್ಲಿ ನಡೆಯುವ ಇವೆಂಟ್​​ ಯಾವುದು? ಈ ಕಾರ್ಯಕ್ರಮಕ್ಕೆ ಯಾರೆಲ್ಲಾ ಬರಲಿದ್ದಾರೆ? ಭಾರತದ ಪ್ರಧಾನ ಮಂತ್ರಿ ಯಾರು? ಎಂದು ಪ್ರಶ್ನೆಗಳನ್ನು ಕೇಳಿದಾಗ ಸರಿಯಾದ ಉತ್ತರವನ್ನು ನೀಡುತ್ತಿದೆ. ಮುಂದಿನ ದಿನಗಳಲ್ಲಿ ತಜ್ಞರು ಈ ರೋಬಾಟ್ ಮೂಲಕ ಅನೇಕ ಪ್ರಾಜೆಕ್ಟ್​​ಗಳನ್ನು ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net