

ಬೆಂಗಳೂರು: ಭೂಮಿ ಖರೀದಿ ಅಥವಾ ಮಾರಾಟಗಾರರಿಗೆ ದಾರಿಯೇ ದೊಡ್ಡ ಸಮಸ್ಯೆಯಾಗಿ ಕಾಡಲಿದೆ. ಇದರಿಂದ ಭೂಮಿಯ ಮಾರುಕಟ್ಟೆ ಬೆಲೆಯಲ್ಲಿಯೂ ಏರುಇಳಿತ ಆಗಲಿದೆ.
ಇದನ್ನು ಮನಗೊಂಡ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದ್ದು, ದಾರಿ ಬಿಟ್ಟುಕೊಡದೆ ಇದ್ದರೇ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿಯೂ ಎಚ್ಚರಿಕೆ ಕೊಟ್ಟಿದೆ.
ರೈತರು ಕೃಷಿ ಉದ್ದೇಶಕ್ಕೆ ಬಳಸುವ ದಾರಿಯನ್ನು ಖಾಸಗಿ ಭೂಮಿ ಮಾಲೀಕರು ಬಿಡದೆ ಸಮಸ್ಯೆ ಉಂಟು ಮಾಡುತ್ತಿರುವುದು ರಾಜ್ಯದಲ್ಲಿ ಹೆಚ್ಚಾಗುತ್ತಿವೆ. ಇದಲ್ಲದೆ, ಗ್ರಾಮ ನಕಾಶೆಯಲ್ಲಿ ದಾರಿ ಎಂದು ಉಲ್ಲೇಖ ಇದ್ದರೂ ಓಡಾಡಲು ಅವಕಾಶ ನೀಡದೆ ದಾರಿ ಬಂದ್ ಮಾಡಿರುವ ಸಾಕಷ್ಟು ದೂರುಗಳು ಸರ್ಕಾರಕ್ಕೆ ಗಮನಕ್ಕೆ ಬಂದಿದೆ. ಇದಕ್ಕೆ ಮೂಲ ಕಾರಣ ಸ್ಥಳೀಯರಲ್ಲಿ ಇರುವ ವೈಯಕ್ತಿಕ ದ್ವೇಷ, ಅಸೂಯೆಗಳು ಮತ್ತು ಹೊಂದಾಣಿಕೆ ಕೊರತೆ ಇಂದಾಗಿ ಸಮಸ್ಯೆಯಾಗಿಯೇ ಉಳಿದಿದೆ.
ಇದನ್ನು ಗಂಭೀರವಾರಿ ಪರಿಗಣಿಸಿದ ಕಂದಾಯ ಇಲಾಖೆ ದಾರಿ ಕುರಿತು ಸ್ಪಷ್ಟ ಆದೇಶ ಹೊರಡಿಸಿದೆ. ರೈತರು ಕೃಷಿ ಉದ್ದೇಶಗಳಿಗಾಗಿ ತಿರುಗಾಡಲು ಬಳಸುವ ಖಾಸಗಿ ಜಮೀನುಗಳಲ್ಲಿ ಕಾಲುದಾರಿ, ಬಂಡಿದಾರಿ ಅಥವಾ ಸೌಲಭ್ಯ ಕಲ್ಪಿಸುವಂತಹ ಕ್ರಮ ವಹಿಸುವಂತೆ ತಹಸೀಲ್ದರ್‌ಗೆ ಸೂಚನೆ ನೀಡಿದೆ.
ಇದಲ್ಲದೆ, ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ನಿಯಮ 59ರಲ್ಲಿ ಭೂ ಮಾಲೀಕ ಅಥವಾ ವಾರಸುದಾರರಿಗೆ ‘ದಾರಿಯ ಹಕ್ಕುಗಳು ಮತ್ತು ಇತರೆ ಅನುಭೋಗದ ಹಕ್ಕುಗಳ’ ಬಗ್ಗೆ ಉಲ್ಲೇಖಿಸಲಾಗಿದೆ. ಸಂಬಂಧಪಟ್ಟ ಜಮೀನುಗಳ ಭಾಗಿದಾರರು ಒಪ್ಪಿರುವಂತಹ ಸಂದರ್ಭದಲ್ಲಿ ಹಕ್ಕುಗಳ ದಾಖಲೆ ರಿಜಿಸ್ಟ್ರಾರ್‌ನಲ್ಲಿ ನಮೂದು ಮಾಡಲು ಅವಕಾಶವಿದೆ.
ದಿ ಇಂಡಿಯನ್ ಅಸಸ್‌ಮೆಂಟ್ ಆಕ್ಟ್ 1882ರಂತೆ ಪ್ರತಿ ಜಮೀನು ಮಾಲೀಕರು ಅಥವಾ ಜಮೀನಿನ ಅನುಭವದಲ್ಲಿ ಇರುವವರು ಅವರ ಭೂಮಿಯನ್ನು ಪ್ರವೇಶಿಸುವ ಹಕ್ಕು ಮತ್ತು ವಹಿವಾಟಿನ ಹಕ್ಕನ್ನು ಹೊಂದಿದ್ದಾರೆ. ಇದಕ್ಕೆ ಬಾಜುದಾರರಿಂದ ಯಾವುದೇ ಹಸ್ತಕ್ಷೇಪಕ್ಕೆ ಅಥವಾ ಹಕ್ಕನ್ನು ಕಿತ್ತುಕೊಳ್ಳುವ ಅಧಿಕಾರ ಇಲ್ಲ. ಏನಾದರೂ ತೊಂದರೆ ಕೊಟ್ಟು ಸರ್ಕಾರ ಕ್ರಮ ವಹಿಸಲಿದೆ ಎಂದು ಕಂದಾಯ ಇಲಾಖೆ ಎಚ್ಚರಿಕೆ ನೀಡಿದೆ. ಹೊಸದಾಗಿ ಭೂಮಿ ಖರೀದಿ ಮಾಡಲು ಉದ್ದೇಶಿಸಿರುವ ಜನರು ನಿಟ್ಟೂಸಿರು ಬಿಟ್ಟಂತೆ ಆಗಿದೆ. ಭೂಮಿ ಖರೀದಿ ಮಾಡಿದ ಮೇಲೆ ಅವರು ತಮ್ಮ ಜಮೀನಿಗೆ ದಾರಿ ಕೇಳುವ ಅಧಿಕಾರ ಇರಲಿದೆ. ಬಾಜುದಾರರು ಏನಾದರೂ ತೊಂದರೆ ಕೊಟ್ಟ ಸಂಬಂಧಪಟ್ಟ ತಹಸೀಲ್ದರ್‌ಗೆ ದೂರು ಕೊಟ್ಟು ದಾರಿ ಬಿಡಿಸಿಕೊಳ್ಳುವ ಅಧಿಕಾರ ಸಹ ಸಹ ಹೊಂದಿದ್ದಾರೆ.
ಜಮೀನಿಗೆ ದಾರಿ ಬಿಡಲು ನಿರಾಕರಿಸಿದರೇ ಅಂತವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಮತ್ತು ಸಮಸ್ಯೆ ಬಗೆಹರಿಸುವ ಅಧಿಕಾರವನ್ನು ಆಯಾ ತಹಸೀಲ್ದರ್‌ಗೆ ವಹಿಸಲಾಗಿದೆ.
ಅಪರಾಧ ಸಂಹಿತೆ 1973ರ ಕಲಂ 147ರ ಅನ್ವಯ ‘ಭೂಮಿ ಮತ್ತು ನೀರಿನ ಹಕ್ಕಿನ ಉಪಯೋಗ’ ಕುರಿತು ಸ್ಥಳೀಯ ಶಾಂತಿಗೆ ಭಂಗ ಉಂಟಾಗುವ ಸಂದರ್ಭಗಳಲ್ಲಿ ಅದನ್ನು ನಿವಾರಿಸಲು ಕಾನೂನು ರೀತಿ ತಹಸೀಲ್ದರ್ ತಾಲೂಕು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಆಗಿ ಕ್ರಮ ವಹಿಸುವ ಅಧಿಕಾರ ಹೊಂದಿರುತ್ತಾರೆ. ತಾಲ್ಲೂಕಿನ ತಹಸೀಲ್ದರ್‌ಗಳು ನಕಾಶೆ ಉಲ್ಲೇಖಿತ ಕಾಲುದಾರಿ, ಬಂಡಿದಾರಿ ಅಥವಾ ರಸ್ತೆಗಳಲ್ಲಿ ಅನ್ಯ ಕೃಷಿ ಬಳಕೆದಾರರು ತಿರುಗಾಡಲು ಅವಕಾಶ ನೀಡದೆ ಅಡ್ಡಿಪಡಿಸುವಂತಹ ಅಥವಾ ದಾರಿ ಮುಚ್ಚಿದ್ದರೇ ಅವುಗಳನ್ನು ತೆರವುಗೊಳಿಸಬೇಕು. ತಿರುಗಾಡಲು ದಾರಿಗಳನ್ನು ಸುಗಮಗೊಳಿಸಲು ಅಧಿಕಾರವನ್ನು ತಹಸೀಲ್ದರ್‌ಗೆ ವಹಿಸಿ ಕಂದಾಯ ಇಲಾಖೆ ವಹಿಸಿದೆ.