ಸಿಎಂ ಬದಲಾವಣೆ ಪ್ರಶ್ನೆ ಹೈಕಮಾಂಡ್  ಮುಂದೆ ಇಲ್ಲ: ದೇಶಪಾಂಡೆ|CM Change

Deshapande
Published on

ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ಪ್ರಶ್ನೆ ಹೈಕಮಾಂಡ್ ಮುಂದೆಯೂ ಇಲ್ಲ(The question of CM change is not before the High Command), ಶಾಸಕಾಂಗ ಪಕ್ಷದ ಮುಂದೇಯೂ ಇಲ್ಲ. ಈ ಕುರಿತ ಚರ್ಚೆಗೆ ಪೂರ್ಣ ವಿರಾಮ ಹಾಕಬೇಕು ಎಂದು ಹಿರಿಯ ಶಾಸಕ ಆರ್.ವಿ.ದೇಶಪಾಂಡೆ(RV Deshpande)ಹೇಳಿದರು.

ವಿಕಾಸಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಹೇಳಿದರೂ ಬಹಿರಂಗ ಹೇಳಿಕೆ ನೀಡುತ್ತಿರುವ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಹೈಕಮಾಂಡ್ ಬಹಳ ಸ್ಟ್ರಾಂಗ್ ಇದೆ. ಈಗ ಇನ್ನೂ ಸ್ವಲ್ಪ ಹೆಚ್ಚು ಸ್ಟ್ರಾಂಗ್ ಆಗಿದೆ ಎಂದರು.

ರಾಜ್ಯ ಕಾಂಗ್ರೆಸ್ ನಾಯಕರು ಹೈಕಮಾಂಡ್ ಭೇಟಿ ಮಾಡುವ ಕುರಿತ ಪ್ರಶ್ನೆಗೆ, ನನ್ನ ದೃಷ್ಟಿಯಿಂದ ಪಕ್ಷದಲ್ಲಿ ಒಗ್ಗಟ್ಟು ಇದೆ. ಪಕ್ಷದಲ್ಲಿ ಎಲ್ಲರೂ ಹೆಜ್ಜೆ ಹಾಕುತ್ತಿದ್ದಾರೆ. ಯಾರಲ್ಲೂ ಸಹ ಭಿನ್ನಾಭಿಪ್ರಾಯ ಕಂಡು ಬಂದಿಲ್ಲ. ಈಗ ರಾಜಣ್ಣ ಕಣ್ಣಿಗೆ ಎನಾದರೂ ಬಿದ್ದಿದೆ ಅಂದರೆ ಅವರ ಪ್ರಕಾರ ಹೇಳಿರಬಹುದು ಎಂದು ತಿಳಿಸಿದರು.

ಶಾಸಕ ಬಿ.ಆರ್.ಪಾಟೀಲ್ ಹಿರಿಯರು. ಆ ತರಹ ಹೇಳಿಕೆ ಯಾಕೆ ಕೊಟ್ಟರು ನನಗೆ ಗೊತ್ತಿಲ್ಲ. ಆ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದರು.

ತಾವು ಸಿಎಂ ಸ್ಥಾನದ ಆಕಾಂಕ್ಷಿನಾ ಎಂಬ ಪ್ರಶ್ನೆಗೆ, ಆ ತರಹದ ಪರಿಸ್ಥಿತಿ ಬರುವುದಿಲ್ಲ. ಆ ರೀತಿಯ ಬಂದಾಗ ನೋಡೋಣ. ಹಾಗಾಗಿ ನಾನು ಅದಕ್ಕೆ ಏನು ಉತ್ತರ ಕೊಡಲಿ? ಎಂದರು.

ಮುಂದಿನ ಸಿಎಂ ಹೇಳಿಕೆ ಬಗ್ಗೆ ನಾನು ಹೆಚ್ಚು ಕಾಮೆಂಟ್ ಮಾಡುವುದಿಲ್ಲ. ಎಐಸಿಸಿ ಅಧ್ಯಕ್ಷರು ಹೇಳಿದ ಮೇಲೆ ಎಲ್ಲರೂ ಫಾಲೋ ಮಾಡಬೇಕು. ಇದರ ನಡುವೆಯೂ ಹೇಳಿಕೆಗಳು ಬಂದಾಗ ನಾಯಕರೇ ತೀರ್ಮಾನ ಮಾಡಬೇಕು. ಅಶಿಸ್ತು ಅಶಿಸ್ತೇ, ಮುಂದಿನ ಕ್ರಮವನ್ನು ಶಿಸ್ತು ಸಮಿತಿ ತೀರ್ಮಾನ ಮಾಡಬೇಕು.

-ಬಿ.ಕೆ.ಹರಿಪ್ರಸಾದ್, ಮೇಲ್ಮನೆ ಸದಸ್ಯ.

ಸಿಎಂ ಬದಲಾವಣೆ ಕುರಿತು ನಮ್ಮ ಯಾವ ಶಾಸಕರು, ಮಂತ್ರಿಗಳೂ ಚಿಂತೆ ಮಾಡುತ್ತಿಲ್ಲ. ಅದರ ಬಗ್ಗೆ ಮಾತಾಡುವ ಅವಶ್ಯಕತೆ ಇಲ್ಲ. ಬಾಯಿ ಮುಚ್ಚಿಕೊಂಡು ಇರಬೇಕು ಎಂದು ಖರ್ಗೆ ಹೇಳಿದ್ದಾರೆ

ಪ್ರತಿಪಕ್ಷ ನಾಯಕ ಅಶೋಕ್ ಏನಾದರೂ ಹೇಳಲೇಬೇಕು. ಅವರು ಮಾತಾಡದಿದ್ದರೆ ಮೇಲಿನವರು ಕೇಳುತ್ತಾರೆ. ಹಾಗಾಗಿ ಮಾತನಾಡುತ್ತಾರೆ. ಅವರ ತಟ್ಟೆಯ ಹೆಗ್ಗಣ ನಾವ್ಯಾಕೆ ತಗೆಯಬೇಕು. ಅವರೇ ತಗೆದುಕೊಳ್ಳಲಿ.

-ಲಕ್ಷ್ಮಣ ಸವದಿ, ಶಾಸಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net