ಹಾಲು ಖರೀದಿ ದರ 1 ರೂ. ಕಡಿತ

kolar milk union
ಕೋಲಾರ - ಚಿಕ್ಕಬಳ್ಳಾಪುರ ಹಾಲು ಒಕ್ಕೂಟ
Published on

ಕೋಲಾರ: ಜಿಲ್ಲೆಯಲ್ಲಿ ತೀವ್ರ ಬರಪಸ್ಥಿತಿ ಎದುರಾಗಿದ್ದು, ಎಲ್ಲ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳು ಎಂದು ರಾಜ್ಯ ಸರ್ಕಾರ ೋಷಣೆ ಮಾಡಿದೆ. ಇಂತಹ ಸಂದರ್ಭದಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟವು (ಕೋಚಿಮುಲ್) ಹಾಲಿನ ಖರೀದಿ ದರ ಕಡಿತಗೊಳಿಸಿದ್ದು, ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೈನೋದ್ಯಮ ಕೋಲಾರ-ಚಿಕ್ಕಬಳ್ಳಾಪುರ ರೈತರ ಜೀವನಾಡಿಯಾಗಿದ್ದು, ಬಹುತೇಕ ರೈತ ಕುಟುಂಬಗಳು ಹೈನೋದ್ಯಮವನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಬರದಿಂದ ತತ್ತರಿಸಿ ಹೋಗಿದ್ದ ರೈತರನ್ನು ಸಂಕಷ್ಟಕ್ಕೆ ಸಿಲುಕಿರುವ ಪ್ರಯತ್ನ ಒಕ್ಕೂಟ ಮಾಡಿದೆ.ನ.28ರಂದು ನಡೆದ ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ರೈತರಿಂದ ಖರೀದಿ ಮಾಡುವ ಹಾಲಿನ ದರವನ್ನು ಪ್ರತಿ ಲೀಟರ್ ಮೇಲೆ 1 ರೂ. ಇಳಿಕೆ ಮಾಡಿ, ದಿಢೀರನೆ ನಿರ್ಣಯ ಕೈಗೊಂಡಿದೆ. ಅದರಂತೆಯೇ ವ್ಯವಸ್ಥಾಪಕ ನಿರ್ದೇಶಕರು ಪ್ರತಿ ಲೀಟರ್ ಖರೀದಿ ದರ 1 ರೂ. ಕಡಿತಗೊಳಿಸಿದ್ದು, ಪರಿಷ್ಕೃತ ದರವು ಡಿ.1ರಿಂದಲೇ ಜಾರಿಗೆ ಬರುವಂತೆ ಎಂದು ಸುತ್ತೋಲೆ ಹೊರಡಿಸಿ, ಪ್ರಾಥಮಿಕ ಹಾಲು ಸಹಕಾರ ಸಂಘಗಳ ಅಧ್ಯಕ್ಷರಿಗೆ ಹಾಗೂ ಕಾರ್ಯದರ್ಶಿಗಳಿಗೆ ಪತ್ರವನ್ನು ರವಾನಿಸಿದ್ದಾರೆ. ಪ್ರತಿ ಲೀಟರ್‌ಗೆ 34.40 ರೂ. ಇದ್ದ ಹಾಲಿನ ದರ ಇದೀಗ  33.40 ರೂ. ಆಗಲಿದೆ.
ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಾಗೂ ಹಿಂಗಾರು ಸಕಾಲದಲ್ಲಿ ಮಳೆಯಾಗದೆ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ದರವನ್ನು ಕಡಿತಗೊಳಿಸಿರುವುದನ್ನು ಗಮನಿಸಿದರೆ ಒಕ್ಕೂಟಕ್ಕೂ ಬರ ತಟ್ಟಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಒಕ್ಕೂಟದ ಹಾಲು ಶೇಖರಣೆ ಹಾಗೂ ಆರ್ಥಿಕ ಪರಿಸ್ಥಿತಿಯನ್ನು ಸುಧೀರ್ಘವಾಗಿ ಚರ್ಚಿಸಿ ದರ ಕಡಿತಗೊಳಿಸಿರುವುದಾಗಿ ಸುತ್ತೋಲೆಯಲ್ಲಿ ಒಪ್ಪಿಕೊಂಡಿದ್ದಾರೆ. ಇದರಿಂದಾಗಿ ಒಕ್ಕೂಟವು ನಷ್ಟದಲ್ಲಿ ನಡೆಯುತ್ತಿದಿಯೇ ಎಂಬ ಅನುಮಾನಗಳು ವ್ಯಕ್ತವಾಗಿದೆ.ಕೋಲಾರದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಕೆಎಂಎ್ನಿಂದ ಹಣ ಬಿಡುಗಡೆ ಮಾಡಿದಾಗ ಆಡಳಿತ ಮಂಡಳಿಯವರು ಕುಟುಂಬದ ಸಮೇತ ಾರೀನ್ ಟೂರ್ ಹೋದರು. ಕೋಲಾರ-ಚಿಕ್ಕಬಳ್ಳಾಪುರ ನಿರ್ದೇಶಕರಿಗೆ ರೈತರ ಬಗ್ಗೆ ಕಾಳಜಿಯಿಲ್ಲ. ಬರದ ಪರಿಸ್ಥಿತಿಯಲ್ಲಿ ರೈತರ ನೆರವಿಗೆ ಧಾವಿಸುವುದು ಬಿಟ್ಟು ಗಾಯದ ಮೇಲೆ ಬರೆ ಎಳೆದಿದ್ದಾರೆ ಎಂದು ಸಂಸದ ಎಸ್.ಮುನಿಸ್ವಾಮಿ ಆರೋಪಿಸಿದರು.
ಹಾಲಿನ ಖರೀದಿ ದರವನ್ನು ಬರದ ಸಂದರ್ಭದಲ್ಲಿ ಕಡಿಮೆ ಮಾಡಬಾರದಿತ್ತು. ರೈತರಿಗೆ ತೊಂದರೆ ಮಾಡುವುದು, ಅನ್ಯಾಯ ಮಾಡಿದರೆ ಬಿಪಿ, ಶುಗರ್ ಬರುವುದು ಖಚಿತ. ಈ ವಿಚಾರದಲ್ಲಿ ಯಾರೇ ಆಗಿರಲಿ. ಈಗಿನ ಪರಿಸ್ಥಿತಿಯಲ್ಲಿ 5ರೂ.ಅಥವಾ 10ರೂ ಹೆಚ್ಚಾಗಿ ಕೊಡಬೇಕಿತ್ತು. ಈ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ಅಸಮಾಧಾನ ಹೊರಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net