ಸದಸ್ಯರ ಪ್ರತಿಭಟನೆ ಸಮಂಜಸವಲ್ಲ

13ckm7
ಮಹಮದ್ ಅಕ್ಬರ್
Published on

ಚಿಕ್ಕಮಗಳೂರು: ನಗರದ ಆಜಾದ್ ಪಾರ್ಕ್ ಬಳಿ ನಗರಸಭೆಯಿಂದ ನಿರ್ಮಿಸಿರುವ ವ್ಯಾಯಾಮ ಶಾಲೆಗೆ ಅಂಬೇಡ್ಕರ್ ಹೆಸರಿಡುವುದು ಸೂಕ್ತ. ಆದರೆ ಸಭೆಯಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳುವುದು ಬಿಟ್ಟು, ಕೆಲ ಸದಸ್ಯರು ಪ್ರತಿಭಟನೆ ನಡೆಸಿರುವುದು ಸಮಂಜಸವಲ್ಲ ಎಂದು ನಗರಸಭೆ ಮಾಜಿ ಅಧ್ಯಕ್ಷ ಮಹಮದ್ ಅಕ್ಬರ್ ಹೇಳಿದರು.

ಡಾ. ಬಿ.ಆರ್.ಅಂಬೇಡ್ಕರ್ ಜ್ಯಾತ್ಯತೀತ ನಾಯಕರು, ಸರ್ವರ ಸಮಾನತೆಗೆ ಹೋರಾಡಿದ್ದಾರೆ. ನಗರಸಭೆ ವಾಣಿಜ್ಯ ಮಳಿಗೆಯಲ್ಲಿ ಆರಂಭವಾಗುವ ವ್ಯಾಯಾಮ ಶಾಲೆಗೆ ಜೈ ಭೀಮ್ ಹೆಸರಿಡುವುದು ಸೂಕ್ತ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಹಿಂದೆ ನಾನು ನಗರಸಭೆ ಅಧ್ಯಕ್ಷನಾಗಿದ್ದಾಗ ಸಂದರ್ಭ ಅಸಮಾಧಾನಕ್ಕೆ ಕಾರಣವಾಗದಂತೆ ನಗರಸಭೆ ಸದಸ್ಯರೊಂದಿಗೆ ಚರ್ಚಿಸಿ ಮಾರ್ಕೆಟ್ ರಸ್ತೆಗೆ ಅಂಬೇಡ್ಕರ್ ಅವರ ಹೆಸರಿಡಲಾಗಿತ್ತು. ವ್ಯಾಯಾಮ ಶಾಲೆಗೆ ಹೆಸರಿಡುವ ವಿಚಾರದಲ್ಲಿ ನಗರಸಭೆ ಎದುರು ಸದಸ್ಯರು ಪ್ರತಿಭಟನೆ ನಡೆಸಿರುವುದು ಸಮಂಜಸವಲ್ಲ. ಇಂತಹ ವಿಷಯಗಳನ್ನು ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿಯಾಮವಳಿ ಅನುಸಾರ ನಿರ್ಧಾರ ಕೈಗೊಂಡು ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.
ಅರ್ಹರಿಗೆ ನಿವೇಶನ ಹಂಚಿಕೆ ಹಾಗೂ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಅಧ್ಯಕ್ಷರು ಹಾಗೂ ಸದಸ್ಯರು ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಅನ್ಸರ್, ನೂರುದ್ದೀನ್ ಫಾರಜ್, ಜುಹೇಬ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net