ಅಭಿವೃದ್ಧಿಗೆ ಹೊಸ ಭಾಷ್ಯ ಬರೆದ ಪ್ರಧಾನಿ

rpt singh
Published on

ರಿಪ್ಪನ್‌ಪೇಟೆ: ಆರ್ಥಿಕ ತಜ್ಞ ಹಾಗೂ ಸಜ್ಜನ ರಾಜಕಾರಣಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ತಮ್ಮ ಅವಧಿಯಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದರು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಧನಲಕ್ಷ್ಮೀ ಹೇಳಿದರು.

ಪಟ್ಟಣದ ಗ್ರಾಪಂ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಆರ್ಥಿಕ ಪರಿಸ್ಥಿತಿಯನ್ನು ಅತಿಸೂಕ್ಷ್ಮವಾಗಿ ಅರಿತು ಸುಧಾರಣೆಗೆ ಪ್ರಯತ್ನಿಸಿದ ಆಡಳಿತಗಾರ ಎಂದು ಬಣ್ಣಿಸಿದರು.

ಪ್ರಧಾನಿಯಾಗಿದ್ದ ಸಂದರ್ಭ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಅಧಃಪತನದತ್ತ ಸಾಗದೆ ಉತ್ತಮ ನಿರ್ವಹಣೆ ಮಾಡಿ ಅಭಿವೃದ್ಧಿಗೆ ಹೊಸ ಭಾಷ್ಯ ಬರೆದಿದ್ದಾರೆ. ಅವರ ವಿದೇಶಾಂಗ ನೀತಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಂಬಂಧ ಹೊಂದಿದ್ದನ್ನು ಸ್ಮರಿಸಬಹುದು. ಆಧಾರ್, ನರೇಗಾದಂತಹ ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದರು. ಅವರ ನಿಧನದಿಂದ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೌನಾಚರಣೆ ಮಾಡಲಾಯಿತು. ಕೆಂಚನಾಲ ಗ್ರಾಪಂ ಅಧ್ಯಕ್ಷ ಉಬೇದುಲ್ಲಾ ಷರ್ೀ, ಸದಸ್ಯರಾದ ಎನ್.ಚಂದ್ರೇಶ, ಮಧುಸೂದನ, ಗಣಪತಿ, ಪ್ರಕಾಶ್ ಪಾಲೇಕರ್, ಮುಖಂಡರಾದ ಬಿ.ಪಿ. ರಾಮಚಂದ್ರ, ಎಚ್.ವಿ.ಈಶ್ವರಪ್ಪ ಗೌಡ, ಶ್ರೀಧರ, ಉಂಡುಗೋಡು ನಾಗಪ್ಪ, ಕೆರೆಹಳ್ಳಿ ನವೀನ, ಹಬೀಬ್, ರಾಕೇಶ್, ಉಮೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net