ಕಾರಿನಲ್ಲಿ ಹೊತ್ತೊಯ್ದು ಅರ್ಚಕನ ಮೇಲೆ ಹಲ್ಲೆ

16Goa1
Published on

ಪಣಜಿ: ವಾಸ್ಕೋದ ಮುರಗಾಂವ ಕೇಸರವಾಲ್ ಗಣೇಶ ಮಂದಿರದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವ ಕರ್ನಾಟಕದ ವಿಜಯಪುರದ ಬಸವರಾಜ್ ಹೊಸ್ಮಠ ಎಂಬುವರ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಸವರಾಜ್ ಅವರು ಅನೇಕ ವರ್ಷಗಳಿಂದ ಗೋವಾದ ಮುರಗಾಂವ ಗಣೇಶ ಮಂದಿರದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಇದ್ದಕ್ಕಿದ್ದಂತೆಯೇ ಅರ್ಚಕರನ್ನು ಸ್ಥಳೀಯರು ಕಾರಿನಲ್ಲಿ ಹೊತ್ತೊಯ್ದು ಥಳಿಸಿ ಬೆದರಿಕೆಯೊಡ್ಡಿದ್ದಾರೆ ಎನ್ನಲಾಗಿದೆ. ದೇವಸ್ಥಾನದ ಪೂಜೆ ಬಿಟ್ಟು ವಾಪಸ್ ಊರಿಗೆ ತೆರಳುವಂತೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಇದರಿಂದ ಭಯಭೀತರಾಗಿರುವ ಅರ್ಚಕರು ಊರಿಗೆ ವಾಪಸ್ ತೆರಳಲು ಸಿದ್ಧತೆ ನಡೆಸಿದ್ದರು. ವಿಷಯ ತಿಳಿದ ಭಕ್ತರು ಹಾಗೂ ದೇವಸ್ಥಾನ ಸಮಿತಿ ಪ್ರಮುಖರು ಭೀತಿಗೊಳಗಾಗಿದ್ದು, ದೇವಸ್ಥಾನವನ್ನು ತೆರವುಗೊಳಿಸಲು ಈ ರೀತಿ ಕೃತ್ಯ ನಡೆಸಲಾಗುತ್ತಿದೆಯೇ..? ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net