ಮುಂದಿನ ವಾರ ಎಲ್​ಪಿಜಿ ಬೆಲೆ ಏರಿಕೆ?

LPG
Published on

ನವದೆಹಲಿ: ಇಂಧನ ಬೆಲೆ ಏರಿಕೆ ಬೆನ್ನಲ್ಲೇ ಮುಂದಿನ ವಾರ ಅಡುಗೆ ಅನಿಲದ ಬೆಲೆ ಹೆಚ್ಚಳವಾಗುವುದು ಬಹುತೇಕ ನಿಶ್ಚಿತವಾಗಿದೆ. ಮನೆ ಬಳಕೆಯ ಸಬ್ಸಿಡಿ ದರದ ಅನಿಲ, ಸಬ್ಸಿಡಿಯೇತರ ಹಾಗೂ ಕೈಗಾರಿಕಾ ಅನಿಲ ಬೆಲೆಯೂ ಏರಿಕೆಯಾಗುವ ಸಾಧ್ಯತೆ ಇದೆ.

14.2 ಕೆಜಿ ಎಲ್​ಪಿಜಿ ಸಿಲಿಂಡರ್ ದರಗಳನ್ನು ಅಕ್ಟೋಬರ್ 6ರಂದು 15 ರೂಪಾಯಿಯಷ್ಟು ಏರಿಸಲಾಗಿತ್ತು. ಇದರಿಂದಾಗಿ ಜುಲೈ ನಂತರ ಅಡುಗೆ ಅನಿಲ ಬೆಲೆ 90 ರೂಪಾಯಿ ಹೆಚ್ಚಾಗಿದ್ದು ಈಗ ಮತ್ತೊಮ್ಮೆ ಏರಿಕೆಯಾಲಿದೆ. ಅಂತಾರಾಷ್ಟ್ರೀಯ ಇಂಧನ ಬೆಲೆಗಳಲ್ಲಿ ಭಾರಿ ಏರಿಕೆಯಾಗಿರುವುದರಿಂದ ತಲಾ ಸಿಲಿಂಡರ್ ಮೇಲಿನ ಅಂಡರ್ ರಿಕವರಿ ಅಥವಾ ನಷ್ಟ ನೂರು ರೂಪಾಯಿಗೂ ಅಧಿಕವಾಗಿದೆ. ಹೀಗಾಗಿ ದರ ಏರಿಸುವುದು ಅನಿವಾರ್ಯ ಎಂದು ಕಂಪನಿಗಳು ಹೇಳಿವೆ.

35 ಪೈಸೆ ಏರಿಕೆ: ಈ ನಡುವೆ, ಎರಡು ದಿನಗಳ ವಿರಾಮದ ನಂತರ, ಬುಧವಾರ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು 35 ಪೈಸೆ ಏರಿಸಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಗಳು ಹೇಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net