ಅಮೆರಿಕದಲ್ಲಿ 44 ರೂಪಾಯಿ ತಲುಪಿದ ಒಂದು ಮೊಟ್ಟೆ ಬೆಲೆ

9-67f80d9e209c0
Published on

ವಾಷಿಂಗ್ಟನ್: ಅಮೆರಿಕದಲ್ಲಿ ಬರ್ಡ್ ಫ್ಲೂ ಪ್ರಕರಣಗಳು ಕಡಿಮೆ ಆಗಿದ್ದರೂ ಮೊಟ್ಟೆ ಬೆಲೆ ಮತ್ತೆ ಏರಿಕೆ ಆಗಿದೆ. ಪ್ರಸ್ತುತ ಒಂದು ಡಜನ್ ಮೊಟ್ಟೆಯ ಬೆಲೆ ದಾಖಲೆಯ 536 ರೂ. (6.23 ಡಾಲರ್)ಗೆ ತಲುಪಿದೆ.

ಗ್ರಾಹಕ ಬೆಲೆ ಸೂಚ್ಯಂಕದ ಇತ್ತೀಚಿನ ವರದಿ ಪ್ರಕಾರ, ಮೊಟ್ಟೆ ಖರೀದಿಸುವ ಗ್ರಾಹಕರು ಮತ್ತು ವ್ಯಾಪಾರಿಗಳು ಇದರಿಂದ ಸದ್ಯ ನಿರಾಳರಾಗುವ ಲಕ್ಷಣ ಕಾಣುತ್ತಿಲ್ಲ. ಏ.20ರಂದು ನಡೆಯವ ಈಸ್ಟರ್ ಹಬ್ಬದವರೆಗೆ ಮೊಟ್ಟೆಗೆ ಬೇಡಿಕೆ ಹೆಚ್ಚಾಗಿರುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಮಾರ್ಚ್ ನಲ್ಲಿ ಸಗಟು ಮೊಟ್ಟೆ ಬೆಲೆ ಗಣನೀಯವಾಗಿ ತಗ್ಗಿದ್ದರೂ, ಚಿಲ್ಲರೆ ಬೆಲೆ ಏರಿಕೆ ಆಗಿರುವುದು ಆಶ್ಚರ್ಯ ಮೂಡಿಸಿದೆ. ಜನವರಿ-ಫೆಬ್ರವರಿಯಲ್ಲಿ ಬರ್ಡ್ ಫ್ಲೂನಿಂದ 3 ಕೋಟಿಗೂ ಹೆಚ್ಚು ಮೊಟ್ಟೆ ಇಡುವ ಕೋಳಿಗಳನ್ನು ಕೊಂದಿದ್ದ ರಿಂದ ಬೆಲೆ ಏರಿತ್ತು. ಕೆಲವು ಫಾರಂಗಳು ಈಗ ಸ್ವಚ್ಛಗೊಳಿಸಿ, ಹೊಸ ಕೋಳಿಗಳನ್ನು ಸಾಕಿ ಉತ್ಪಾದನೆ ಪುನರಾರಂಭಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net