ಸ್ವಾತಂತ್ರೃ ಹೋರಾಟದಲ್ಲಿ ಜನರ ಧ್ವನಿಯಾಗಿದ್ದ ಪತ್ರಿಕಾರಂಗ

sanmana (1)
ಸಾಗರದಲ್ಲಿ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಪತ್ರಕರ್ತ ಶೈಲೇಂದ್ರ ಅವರನ್ನು ಸನ್ಮಾನಿಸಲಾಯಿತು. ಆರ್.ಯತೀಶ್, ಡಾ. ಕೆ.ಪ್ರಭಾಕರರಾವ್, ಎಚ್.ವಿ.ರಾಮಚಂದ್ರರಾವ್, ಗಣಪತಿ ಶಿರಳಗಿ ಇದ್ದರು.
Published on

ಸಾಗರ: ಜಗತ್ತಿನ ವಿವಿಧ ಭಾಗಗಳಲ್ಲಿ ನಡೆದಿದ್ದ ಮಹತ್ತರ ಘಟನೆಗಳನ್ನು ಆಯಾ ಕಾಲಘಟ್ಟದಲ್ಲಿ ಪತ್ರಿಕೆಗಳು ಸಾಕ್ಷಿಕರಿಸಿವೆ ಎಂದು ಸಾಗರ ಉಪವಿಭಾಗಾಧಿಕಾರಿ ಆರ್.ಯತೀಶ್ ಅಭಿಪ್ರಾಯಪಟ್ಟರು.

ನಗರದ ಪತ್ರಿಕಾ ಭವನದಲ್ಲಿ ಪ್ರೆಸ್ ಟ್ರಸ್ಟ್ ಆಫ್ ಸಾಗರ ಮತ್ತು ತಾಲೂಕು ಪತ್ರಕರ್ತರ ಸಂಘದಿಂದ ಶನಿವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 20ನೇ ಶತಮಾನದಲ್ಲಿ ಭಾರತ ಸೇರಿ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಪತ್ರಿಕೆಗಳು ಸ್ವಾತಂತ್ರೃ, ಮಾನವ ಹಕ್ಕುಗಳು, ಕಾನೂನು ಮತ್ತು ಅನೇಕ ವಿಚಾರಗಳ ಬಗ್ಗೆ ಧ್ವನಿಯಾಗಿದ್ದವು ಎಂದು ತಿಳಿಸಿದರು.
ಸ್ವಾತಂತ್ರೃ ಹೋರಾಟದಲ್ಲಿ ಪತ್ರಿಕೆಗಳ ಪಾತ್ರವೂ ಅಪಾರ. ಗಾಂಧಿ ಬರೆದ ಲೇಖನಗಳನ್ನು ಹಳ್ಳಿ ಹಳ್ಳಿಗಳಲ್ಲಿ ಓದುವ ಮೂಲಕ ಜನರನ್ನು ಹೋರಾಟಕ್ಕೆ ಪ್ರೇರೇಪಿಸಲಾಗುತ್ತಿತ್ತು. ಸ್ವಾತಂತ್ರೃ ಸಂದೇಶ, ಹೋರಾಟದ ವಿಷಯಗಳು ಪತ್ರಿಕೆಗಳ ಮೂಲಕ ಜನರಿಗೆ ತಲುಪಿಸಲಾಗುತ್ತಿತ್ತು. ಜನರನ್ನು ಪತ್ರಿಕೆಗಳ ಮೂಲಕ ಜಾಗೃತಗೊಳಿಸಲಾಗುತ್ತಿತ್ತು ಎಂದರು.
ಸಾಗರ ತಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಅಧಿಕಾರದಲ್ಲಿ ಇರುವವರನ್ನು ಎದುರು ಹಾಕಿಕೊಂಡರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ರಾಜಿಯಾದರೆ ಸೌಲಭ್ಯ ಪಡೆದುಕೊಳ್ಳುವ ಅವಕಾಶವಿರುತ್ತದೆ. ಆದರೆ ಇದ್ಯಾವುದಕ್ಕೂ ಮಣೆಹಾಕದೆ ಪತ್ರಿಕಾ ರಂಗ ನಿಷ್ಠುರವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಸಮಾಜ ಸುಧಾರಣೆಯಲ್ಲಿ ಮಾಧ್ಯಮದ ಹೊಣೆಗಾರಿಕೆ ಕುರಿತು ಹೊಸನಗರ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ಕೆ.ಪ್ರಭಾಕರ ರಾವ್ ಮಾತನಾಡಿದರು. ಪತ್ರಿಕಾ ವಿತರಕರಿಗೆ ಸೈಕಲ್‌ಗಳನ್ನು ವಿತರಿಸಲಾಯಿತು. ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎಚ್.ವಿ.ರಾಮಚಂದ್ರ ರಾವ್ ವಿಮೆ ಬಾಂಡ್ ವಿತರಿಸಿದರು. ಪತ್ರಕರ್ತ ಎ.ಆರ್.ಶೈಲೇಂದ್ರ ಅವರನ್ನು ಸನ್ಮಾನಿಸಲಾಯಿತು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಗಣಪತಿ ಶಿರಳಗಿ, ನಗರಸಭೆ ಸದಸ್ಯರಾದ ಆರ್.ಶ್ರೀನಿವಾಸ್, ಪ್ರೇಮಾ ಕಿರಣಸಿಂಗ್, ಪ್ರೆಸ್ ಟ್ರಸ್ಟ್ ಟ್ರಸ್ಟಿ ಎಸ್.ವಿ.ಹಿತಕರ ಜೈನ್, ಎ.ಡಿ.ರಾಮಚಂದ್ರ ಭಟ್, ಲಕ್ಷ್ಮೀನಾರಾಯಣ ಹೆಗಡೆ, ಕೆ.ಎನ್.ವೆಂಕಟಗಿರಿ, ಅಂತೋನಿ ನಜರತ್, ರಮೇಶ್, ರವಿಶಂಕರ ಹೆಗಡೆ, ಧರ್ಮರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net