

ಮದಂ ಮಾಯಾಜಯೇ ಕುರ್ಯಾತ್ ನ ಧಮೇ ನÝ—ಪಿ ಸಂಪದಿ | ಅಮದಾಖ್ಯಮಿದಂ ಶೀಲಂ ಷಟ್ ತ್ರಿಂಶಮಿತಿ ಕೀರ್ತಿತಮ್ || ಮಾಯೆಯನ್ನು ಗೆಲ್ಲುವ ವಿಷಯದಲ್ಲಿ ಮದವನ್ನು ಹೊಂದಬೇಕೇ ಹೊರತು ಧರ್ಮ ಅಥವಾ ಸಂಪತ್ತಿನ ವಿಷಯದಲ್ಲಿ
ತಾಳಬಾರದು. ಅಮದವೆಂದು ಕರೆಯಲ್ಪಡುವ ಇದು ಮೂತ್ತಾರನೆಯ ಶೀಲ. ವಿಭಿನ್ನ ರಂಗಗಳಲ್ಲಿ ತಾನು ಮಾಡಿದ ಸಾಧನೆಯ
ಬಗ್ಗೆ ಮನದಲ್ಲಿ ಉಂಟಾಗುವ ಅಹಂಕಾರವನ್ನೇ ಮದ ಎನ್ನುತ್ತಾರೆ. ಧನಮದ, ಕುಲಮದ, ವಿದ್ಯಾಮದ, ರೂಪಮದ,
ಯೌವನಮದ, ಬಲಮದ, ಪರಿವಾರಮದ, ಅಧಿಕಾರಮದ ಎಂದು ಮದಗಳು ಎಂಟು ಪ್ರಕಾರ. ಧನ ಮೊದಲಾದ ಸಂಗತಿಗಳನ್ನು ಸಂಪಾದಿಸಬೇಕು, ಆದರೆ ಅದರ ಬಗ್ಗೆ ಮನದಲ್ಲಿ ಮದ ಬರಲಾರದಂತೆ ನೋಡಿಕೊಳ್ಳಬೇಕು. ಇವು ಸಾಧನೆಯೆಂಬ ಬಿಂದಿಗೆಗೆ ತೂತುಗಳಿದ್ದಂತೆ.
| ಚಂದ್ರಜ್ಞಾನಾಗಮ (9.94) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು