ತತ್ವಾದರ್ಶ ಇಂದಿಗೂ ಪ್ರಸ್ತುತ

02kgl01
ಕಾರ್ಗಲ್‌ನಲ್ಲಿ ಶರಾವತಿ ವರ್ತಕ ಸಂಘದಿಂದ ಏರ್ಪಡಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪಪಂ ಅಧ್ಯಕ್ಷ ಎಂ.ರಾಜು ಅವರು ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಪಾರ್ಶ್ವನಾಥ್ ಜೈನ್, ವಿ.ಸಂತೋಷ್‌ಕುಮಾರ್, ಟಿ.ಸುರೇಶ್ ಇತರರಿದ್ದರು.
Published on

ಕಾರ್ಗಲ್: ಮಹಾತ್ಮ ಗಾಂಧೀಜಿ ಅವರು ಜೀವನದಲ್ಲಿ ಪಾಲಿಸಿದ ಆದರ್ಶಗಳು ಸಮಾಜಕ್ಕೆ ಇಂದಿಗೂ ಪ್ರಸ್ತುತ ಎಂದು ಶರಾವತಿ ವರ್ತಕ ಸಂಘದ ಗೌರವಾಧ್ಯಕ್ಷ ಮೋಹನ್ ಎಂ. ಪೈ ಹೇಳಿದರು.

ಕೃಷ್ಣಭವನ ಹೋಟೆಲ್ ಆವರಣದಲ್ಲಿ ಶರಾವತಿ ವರ್ತಕ ಸಂಘದಿಂದ ಏರ್ಪಡಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಅಹಿಂಸಾ ಮಾರ್ಗದಲ್ಲಿ ನಡೆದ ಗಾಂಧೀಜಿ ಎಂದಿಗೂ ತತ್ವ-ಸಿದ್ಧಾಂತಗಳನ್ನು ಬಿಟ್ಟುಕೊಡಲಿಲ್ಲ ಎಂದು ತಿಳಿಸಿದರು. ಪಪಂ ನೂತನ ಅಧ್ಯಕ್ಷ ಎಂ.ರಾಜು ಅವರನ್ನು ವರ್ತಕ ಸಂಘದಿಂದ ಸನ್ಮಾನಿಸಲಾಯಿತು.

ಶರಾವತಿ ವರ್ತಕ ಸಂಘದ ಅಧ್ಯಕ್ಷ ಪಾರ್ಶ್ವನಾಥ ಜೈನ್, ಸಲಹೆಗಾರ ವಿ.ಸಂತೋಷ್‌ಕುಮಾರ್, ಟಿ.ಸುರೇಶ್, ಪದಾಧಿಕಾರಿಗಳಾದ ಶರೀಫ್ ಕೊಪ್ಪ, ಬಷೀರ್, ಪ್ರಸನ್ನ, ಜಾಕೀರ್ ಹುಸೇನ್, ಅಣ್ಣಾದೊರೆ, ಶಿಯಾಬ್, ಯು.ಜಿ.ರಾಘವೇಂದ್ರ, ಕೃಷ್ಣ ಎಂ. ಮಹಾಲೆ, ಸತೀಶ್, ಅಮಾನುಲ್ಲಾ, ರವಿಕುಮಾರ್, ಧನಪಾಲ್ ಜೈನ್, ಶಂಕರ್ ಬಿ.ನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net