

ಕೋಲಾರ: ಕೋಲಾರ ಹಾಲು ಉತ್ಪಾದಕರ ಸಹಕಾರ ಸಂಗಳ ಒಕ್ಕೂಟದ (ಕೋಮುಲ್) ವಿಶೇಷ ಸಾಮಾನ್ಯ ಸಭೆಯಲ್ಲಿ ಆಗಿರುವ ರ್ನಿಣಯಗಳನ್ನು ಪ್ರಶ್ನಿಸಿ, ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಶುಕ್ರವಾರ ವಜಾಗೊಳಿಸಿ ಆದೇಶಿಸಿದೆ.
ಮಾ.13ರಂದು ಒಕ್ಕೂಟದ ವಿಶೇಷ ಸಾಮಾನ್ಯ ಸಭೆಯನ್ನು ಆಡಳಿತಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಡಾ.ಮೈತ್ರಿ ಎಚ್.ಪಿ.ಎಸ್ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು, ಸಭೆಯಲ್ಲಿ ಕ್ಷೇತ್ರದ ವಿಂಗಡಣೆಗೆ ಬೈಲಾ ತಿದ್ದುಪಡಿಗೆ ಅನುಮೋದನೆ ಪಡೆಯಲು ವಿಷಯ ಮಂಡಿಸಲಾಗಿತ್ತು. ಇದಕ್ಕೆ ಪರವಾಗಿದ್ದ ಪ್ರತಿನಿಧಿಗಳು ಕೈ ಎತ್ತುವ ಮೂಲಕ ಅನುಮೋದನೆಗೆ ಒಪ್ಪಿಗೆ ನೀಡಿದ್ದರು. ಅದರಂತೆ ಕಲಂ 12(5)ಕ್ಕೆ ಅನುಮೋದನೆ ಸಿಕ್ಕಿದೆ ಎಂದು ಘೋಷಿಸಿದ ಆಡಳಿತಾಧಿಕಾರಿ ಸಭೆಯನ್ನು ಮುಕ್ತಾಯಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಚುನಾವಣೆಗೆ ಅಡ್ಡಿಪಡಿಸಲು ಯತ್ನಿಸಿ ಕೋರ್ಟ್ ಮೋರೆ ಹೋದವರಿಗೆ ಸೋಲಾಗಿದೆ.
ಕೋಲಾರ ತಾಲೂಕಿನ ಕಾಮದೇನಹಳ್ಳಿ ಪ್ರಾಥಮಿಕ ಹಾಲು ಸಹಕಾರ ಸಂದ (ಎಂಪಿಸಿಎಸ್) ಅಧ್ಯಕ್ಷ ಹರೀಶ್ ಹಾಗೂ ಮಾಲೂರು ಅನನ್ಯ ಹಾಲು ಉತ್ಪಾದಕರ ಸಹಕಾರ ಸಂದ ಅಧ್ಯಕ್ಷ ಪ್ರಸನ್ನ ಕೋರ್ಟ್ ಮೋರೆ ಹೋಗಿದ್ದರು.
ವಿಶೇಷ ಸಾಮಾನ್ಯ ಸಭೆಯಲ್ಲಿ ತಿದ್ದುಪಡಿಗೆ ಸಿಕ್ಕಿರುವ ಅನುಮೋದನೆ ರದ್ದುಗೊಳಿಸಬೇಕು ಹಾಗೂ ಮತ ಕ್ಷೇತ್ರ ವಿಂಗಡಣೆಗೆ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು. ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರು ವಜಾಗೊಳಿಸಿದ್ದಾರೆ.
ಎರಡು ಸಂಗಳ ಅಧ್ಯಕ್ಷರು ಕೋರ್ಟ್ ಮೋರೆ ಹೋಗಿದ್ದ ಹಿನ್ನೆಲೆಯಲ್ಲಿ ಜೂ.25ಕ್ಕೆ ನಿಗದಿಯಾಗಿರುವ ಚುನಾವಣೆಗೆ ಅಡ್ಡಿಯಾಗುತ್ತದೆೆ ಎಂಬ ಅನುಮಾನ ಎದುರಾಗಿತ್ತು, ಆದರೆ ಶುಕ್ರವಾರ ಒಕ್ಕೂಟದ ಪರವಾಗಿ ತೀರ್ಪು ಪ್ರಕಟಗೊಂಡಿದ್ದು, ಅಧಿಕಾರಿಗಳು ಚುನಾವಣೆಯ ಪ್ರಕ್ರಿಯೆ ಕೈಗೊಳ್ಳಲಿದ್ದಾರೆ.
ಜೂ.25ಕ್ಕೆ ಚುನಾವಣೆ
ಕೋಮುಲ್ ಒಕ್ಕೂಟದ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನದ ಚುನಾವಣೆ ನಡೆಸಲು ಈಗಾಗಲೇ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಚುನಾವಣೆಯವನ್ನು ಜೂ.25ರಂದು ನಡೆಸಲು ದಿನಾಂಕ ನಿಗದಿಪಡಿಸಿ ಆದೇಶಿಸಿದ್ದಾರೆ. ಅಂದಿನಿಂದ ಚುನಾವಣಾ ಸಿದ್ಧತೆಗಳನ್ನು ಒಕ್ಕೂಟದ ಅಧಿಕಾರಿಗಳು ಕೈಗೊಂಡಿದ್ದು, ಶ್ರೀ ಅಂತಿಮ ಮತದಾರರ ಪಟ್ಟಿ ಪ್ರಕಟಸಲಿದ್ದಾರೆ. ಅನಂತರ ಚುನಾವಣಾ ವೇಳಾಪಟ್ಟಿ ಪ್ರಕಟಗೊಳ್ಳಲಿದೆ.